ಮುಂದಿನ ತಿಂಗಳು ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ !

ಬೆಂಗಳೂರು, ಆಗಸ್ಟ್ 27, 08,2023 (www.justkannada.in): ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಿಸಬಹುದು ಎನ್ನಲಾಗುತ್ತಿದೆ.

ಸರ್ಕಾರವು ಮೂರು ಪ್ರತಿಶತದಷ್ಟು ಡಿಎಯನ್ನು ಹೆಚ್ಚಿಸಿದರೆ, ನಂತರ ನೌಕರರ ತುಟ್ಟಿ ಭತ್ಯೆಯು 42% ರಿಂದ 45% ಕ್ಕೆ ಹೆಚ್ಚಾಗುತ್ತದೆ. ಇದರೊಂದಿಗೆ ಪಿಂಚಣಿದಾರರ ಡಿಆರ್ ಕೂಡ ಶೇ.3ರಿಂದ ಶೇ.45ರಷ್ಟು ಹೆಚ್ಚಾಗಲಿದೆ.

ಜುಲೈ ಒಂದರಿಂದ ಮೂರು ತಿಂಗಳ ನಡುವೆ ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸುತ್ತದೆ ಎನ್ನಲಾಗಿದೆ. ಡಿಎ ಮತ್ತು ಡಿಆರ್ ಹೆಚ್ಚಳದ ಲಾಭವನ್ನು 1 ಕೋಟಿ ನೌಕರರು ಮತ್ತು ಪಿಂಚಣಿದಾರರು ಪಡೆಯಲಿದ್ದಾರೆ.

ಕಳೆದ ಬಾರಿ ಜನವರಿ 1ರಿಂದ ಜಾರಿಗೆ ಬರುವಂತೆ ಶೇ.4ರಷ್ಟು ಡಿಎ ಹೆಚ್ಚಿಸಿದ್ದ ಸರ್ಕಾರ, ಶೇ.38ರಿಂದ ಶೇ.42ಕ್ಕೆ ಏರಿಕೆ ಮಾಡಿದ್ದು, ಈಗ ಶೇ.3ರಷ್ಟು ಹೆಚ್ಚಳ ಮಾಡಿದ ನಂತರ ಶೇ.45ರಷ್ಟು ಡಿಎ ಹೆಚ್ಚಾಗಲಿದೆ.