ಚಂದ್ರಯಾನ-3: ಮತ್ತೊಂದು ಮಹತ್ವದ ವಿಡೀಯೋ ಹಂಚಿಕೊಂಡ ಇಸ್ರೋ!

ಬೆಂಗಳೂರು, ಆಗಸ್ಟ್ 27, 08,2023 (www.justkannada.in): ಚಂದ್ರನ ಮೇಲೆ ಕಾರ್ಯಾಚರಣೆ ನಡೆಸುತ್ತಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಮತ್ತೊಂದು ವಿಡಿಯೋ ಸೆರೆಹಿಡಿದಿದೆ.

ಈಗ ಸೆರೆ ಹಿಡಿದಿರುವ ವಿಡೀಯೋ ಪ್ರಮುಖವಾಗಿ ಎರಡು ಉದ್ದೇಶಗಳನ್ನು ಸಾಧಿಸಿವೆ. ಚಂದ್ರಯಾನ-3 ಮಿಷನ್ ಉದ್ದೇಶಗಳಲ್ಲಿ ಸದ್ಯ 2 ಉದ್ದೇಶಗಳನ್ನು ಸಾಧಿಸಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

.ಚಂದ್ರನ ಮೇಲೆ ರೋವರ್ ತಿರುಗುವ ಪ್ರದರ್ಶನವನ್ನು ಸಾಧಿಸಲಾಗಿದೆ,ಆಂತರಿಕ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪೇಲೋಡ್ ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿದೆ.

ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಅನ್ನು ಉಡಾವಣೆ ಮಾಡಲಾಯಿತು. ಇದು ಆಗಸ್ಟ್ ೨೩ ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಸ್ಪರ್ಶಿಸಿತ್ತು.