ಮೈಸೂರಿನಲ್ಲಿ ನಟ ತೂಗುದೀಪ್ ಶ್ರೀನಿವಾಸ್ ಅವರ 78ನೇ ಜನ್ಮ ದಿನಾಚರಣೆ 

ಮೈಸೂರು,ಏಪ್ರಿಲ್,17,2021(www.justkannada.in) : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ನಟ ಭಯಂಕರ ತೂಗುದೀಪ್ ಶ್ರೀನಿವಾಸ್ ಅವರ 78ನೇ ಜನ್ಮ ದಿನಾಚರಣೆ ಆಚರಿಸುವ ಮೂಲಕ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappaನಗರದ ಲಲಿತ ಮಹಲ್ ರಸ್ತೆಯಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಸದಸ್ಯರು ತೂಗುದೀಪ್ ಶ್ರೀನಿವಾಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ಸಂದರ್ಭ ಪರಿಸರ ಜಾಗೃತಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಬನ್ನೂರು ಅವರು ಮಾತನಾಡಿ, ನಟ ತೂಗುದೀಪ ಕನ್ನಡ ಸಿನಿಮಾರಂಗದಲ್ಲಿ ಖಳನಟನಿಗೂ ಬೇರೆಯದ್ದೇ ಗತ್ತು-ಗಾಂಭೀರ್ಯ ಇದೆ ಎನ್ನುವುದನ್ನ ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ತೋರಿಸಿಕೊಟ್ಟರು ಎಂದರು.

ಕಲಾವಿದನಿಗೆ ಸಾವಿಲ್ಲ. ಸಾವು ಅವರ ದೇಹಕ್ಕೆ ಮಾತ್ರ ಎನ್ನುವ ಮಾತಿದೆ. ಇಂದಿಗೂ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅವರು ಅಜರಾಮರ. ಹಾಗೆಯೇ, ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದಂತಹ ಮೇರು ಕಲಾವಿದರು. ಅಂಥಹವರ ಪ್ರತಿಮೆಯನ್ನು ಲಲಿತಮಹಲ್ ರಸ್ತೆಯಲ್ಲಿರುವ ವೃತ್ತದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ನಗರಪಾಲಿಕೆ ಗೌರವ ಕೊಡಬೇಕ ಎಂದು ಒತ್ತಾಯಿಸಿದರು.

Mysore-Actor-Thangdeep Srinivas-78th birth-Day ಈ ಸಂದರ್ಭ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್, ಹರೀಶ್ ನಾಯ್ಡು, ಸುಚೇಂದ್ರ, ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ನವೀನ್, ಸಂತೋಷ್, ರೋಹಿತ್, ವರುಣ್, ಸಂಜಯ್ ಮುಂತಾದವರು ಉಪಸ್ಥಿತರಿದ್ದರು.

key words : Mysore-Actor-Thangdeep Srinivas-78th birth-Day