ತಲೈವಿ ಚಿತ್ರಕ್ಕಿದ್ದ ಅಡೆತಡೆ ನಿವಾರಣೆ: ಕೋರ್ಟ್’ನಿಂದ ಗ್ರೀನ್ ಸಿಗ್ನಲ್

0
65

ಬೆಂಗಳೂರು, ಏಪ್ರಿಲ್ 17, 2021 (www.justkannada.in): 

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನು ಆಧರಿಸಿದ ಕಂಗನಾ ನಟನೆಯ ತಲೈವಿ ಚಿತ್ರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ.

‘ತಲೈವಿ’ ಚಿತ್ರಕ್ಕೆ ಸ್ವತಃ ಜಯಲಲಿತಾ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಜಯಲಲಿತಾ ಅವರ ಸಂಬಂಧಿ ಜೆ. ದೀಪಾ ಅವರು ‘ತಲೈವಿ’ ಚಿತ್ರದ ವಿರುದ್ಧ ತಕರಾರು ತೆಗೆದಿದ್ದರು. ಈ ಸಿನಿಮಾದಲ್ಲಿ ಜಯಲಲಿತಾ ಅವರ ಖಾಸಗಿ ಜೀವನವನ್ನು ನೆಗೆಟಿವ್ ಆಗಿ ತೋರಿಸಿರಬಹುದು. ಇದರಿಂದ ನಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆ ಆಗಲಿದೆ ಎಂದು ದೂರಿದ್ದರು.

ಇದೀಗ ದೀಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ದೀಪಾ ಅವರ ಆರೋಪಕ್ಕೆ ನಿರ್ದೇಶಕ ಎ.ಎಲ್​. ವಿಜಯ್​ ಪ್ರತಿಕ್ರಿಯೆ ನೀಡಿದ್ದಾರೆ.