ಪ್ರೈಡ್ ಆಫ್ ಕನ್ನಡ ಸಿನಿಮಾ: ಗಳಿಕೆಯಲ್ಲಿ ಪುಷ್ಪಾ ಮೀರಿಸಿದ ‘ಕಾಂತಾರ’

ಬೆಂಗಳೂರು, ನವೆಂಬರ್ 27, 2022 (www.justkannada.in): ಕಾಂತಾರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲ್ಮ್ಸ್​​ಗೆ ಭರ್ಜರಿ ಆದಾಯ ಸಿಕ್ಕಿದೆ. 16 ಕೋಟಿಯ ಸಿನಿಮಾ ಈಗ 400 ಕೋಟಿಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿದೆ.

ಅಂದಹಾಗೆ ಪುಷ್ಪಾ ಸಿನಿಮಾದ ಬಜೆಟ್ ಹಾಗೂ ಕಲೆಕ್ಷನ್ ಅನ್ನು ಕಾಂತಾರ ಸಿನಿಮಾದ ಬಜೆಟ್ ಹಾಗೂ ಕಲೆಕ್ಷನ್​ಗೆ ಹೋಲಿಕೆ ಮಾಡಲಾಗುತ್ತಿದೆ.

160ರಿಂದ 170 ಕೋಟಿ ಬಜೆಟ್​​ನಲ್ಲಿ ಸಿದ್ಧವಾದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 350 ಕೋಟಿಯಷ್ಟು ಕಲೆಕ್ಷನ್ ಮಾಡಿದೆ.

ಬರೀ 16 ಕೋಟಿಯಲ್ಲಿ ರೆಡಿಯಾದ ಕಾಂತಾರ ಸಿನಿಮಾ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದೀಗ ನೆಟ್ಟಿಗರು ಎರಡೂ ಸಿನಿಮಾಗಳ ಬಜೆಟ್ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್ ಮೊತ್ತ ಹೋಲಿಕೆ ಮಾಡುತ್ತಿದ್ದಾರೆ.