ಬೆಂಗಳೂರಿನಲ್ಲಿ ಮಾಸ್ಕ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ: 57.39 ಲಕ್ಷ ರೂ. ಸಂಗ್ರಹ…

ಬೆಂಗಳೂರು,ಜು,4,2020(www.justkannada.in):  ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಓಡಾಡುವವರಿಗೆ ಬಿಬಿಎಂಪಿಯಿಂದ ದಂಡ ವಿಧಿಸಲಾಗಿದ್ದು  ಜೂನ್ ತಿಂಗಳಲ್ಲಿ ಒಟ್ಟು 57.39 ಲಕ್ಷ ರೂ. ಸಂಗ್ರಹ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ಹಿನ್ನೆಲೆ ನಗರಾದ್ಯಂತ ಮಾರ್ಷಲ್‌ಗಳು ಹಾಗೂ ಪೊಲೀಸ್ ಅಧಿಕಾರಿಗಳು ಎಲ್ಲಾ 198 ವಾರ್ಡ್ ಗಳ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು(ಮಾಸ್ಕ್) ಧರಿಸದೇ ಹಾಗೂ  ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುವ/ವಾಹನಗಳಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತಿದೆ.

ಅದರಂತೆ ಜೂನ್ ತಿಂಗಳಲ್ಲಿ ಮಾಸ್ಕ್ ಧರಿಸದ 27,421 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 1,267 ಮಂದಿ ಸೇರಿದಂತೆ 28,688 ಮಂದಿಯಿಂದ ಒಟ್ಟು 57.39 ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ.penalties-not-wearing-mask-bangalore-57-39-lakh-collection

ಕರೋನಾ ಅಟ್ಟಹಾಸ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು ಹೀಗಾಗಿ ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

Key words: Penalties – not wearing – mask – Bangalore-57.39 lakh – Collection.