ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜು: ದಾಖಲಾತಿ ಪರಿಶೀಲನೆಗೆ ಇಂದು ಮೈಸೂರು ವಿವಿ ತಂಡ….

ಮೈಸೂರು,ಫೆಬ್ರವರಿ,24,2021(www.justkannada.in):  ನಗರದ ಜಯಲಕ್ಷ್ಮೀಪುರಂನಲ್ಲಿರುವ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿಗೆ ಇಂದು ಮೈಸೂರು ವಿಶ್ವ ವಿದ್ಯಾನಿಲಯ ತಂಡ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಲಿದೆ.jk

ದಿನಾಂಕ 30 12-2020 ಮತ್ತು 29-1-2021 ನಡೆದ ಸಿಂಡಿಕೇಟ್ ಸಭೆಯ ತೀರ್ಮಾನದಂತೆ, ಕುಲಪತಿಗಳ ಆದೇಶದ ಮೇರೆಗೆ ಇಂದು ಮಧ್ಯಾಹ್ನ 3.15ಕ್ಕೆ  ಮೈಸೂರು ವಿವಿ ತಂಡ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಲಿದೆ.Vidyashrama- First Class College-Mysore university-team - verification -today.

ವಾಣಿಜ್ಯ ನಿಕಾಯದ ಡೀನ್ ಹಾಗೂ ಎಂಬಿಎ ಅಧ್ಯಯನ ವಿಭಾಗದ ಪ್ರಾಧ್ಯಾಪಕ  ಪ್ರೊ.ಡಿ ಆನಂದ್, ವಿಜ್ಞಾನ ನಿಕಾಯದ ಡೀನ್  ಮತ್ತು ಮನಃಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟೇಶ್ ಕುಮಾರ್ ಜಿ,  ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ  ಪ್ರೊ.ಎನ್.ಎಂ ತಳವಾರ್,  ಸಿಂಡಿಕೇಟ್ ಸದಸ್ಯರಾದ ಈ.ಸಿ  ನಿಂಗರಾಜಗೌಡ,  ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ(ಪ್ರಭಾರ) ಆರ್.ಶಿವಪ್ಪ ತಂಡ ಭೇಟಿ ನೀಡಲಿದೆ.

Key words: Vidyashrama- First Class College-Mysore university-team – verification -today.