ಪದ್ಮಶ್ರೀ ಪ್ರಶಸ್ತಿ ವಿಜೇತ ಸುನಿಲ್ ಕೊಠಾರಿ ನಿಧನ

ನವದೆಹಲಿ,ಡಿಸೆಂಬರ್,27,2020(www.justkannada.in)  : ಪದ್ಮಶ್ರೀ ಪ್ರಶಸ್ತಿ ವಿಜೇತ ನೃತ್ಯ ವಿಮರ್ಶಕ, ಸಂಶೋಧಕ ಸುನಿಲ್ ಕೊಠಾರಿ(87)ಹೃದಯ ಸ್ತಂಭನದಿಂದ ದೆಹಲಿ ಆಸ್ಪತ್ರೆಯಲ್ಲಿ ನಿಧನರಾದರು.Teachers,solve,problems,Government,bound,Minister,R.Ashokಸುಮಾರು ಒಂದು ತಿಂಗಳ ಹಿಂದೆಯೇ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ ಎಂದು ಕುಟುಂಬದ ಆಪ್ತೆ ವಿಧಾ ಲಾಲ್ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 20,1933 ರಂದು ಮುಂಬೈನಲ್ಲಿ ಜನಿಸಿದ ಕೊಠಾರಿ ಭಾರತೀಯ ನೃತ್ಯ ಪ್ರಕಾರಗಳ ಅಧ್ಯಯನಕ್ಕೆ ಪ್ರಾರಂಭಿಸುವ ಮುನ್ನ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕೊಠಾರಿ ಅಸ್ಸಾಂನ ಸತ್ಯ ನೃತ್ಯಗಳು, ಭಾರತೀಯ ನೃತ್ಯದಲ್ಲಿ ಹೊಸ ನಿರ್ದೇಶನಗಳು, ಮತ್ತು ಭರತನಾಟ್ಯಂ, ಒಡಿಸ್ಸಿ, ಚೌ, ಕಥಕ್, ಕೂಚುಪುಡಿ ಮತ್ತು ಉದಯ್ ಶಂಕರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಅವರ ಜೀವನಚರಿತ್ರೆ ಸೇರಿದಂತೆ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಬಗ್ಗೆ 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ನೃತ್ಯ ವಿದ್ವಾಂಸ ಕೊಠಾರಿ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಉದಯ್ ಶಂಕರ್ ಅವರ ಸ್ಥಾನವನ್ನಲಂಕರಿಸಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದ ನೃತ್ಯ ವಿಭಾಗದಲ್ಲಿ ಫುಲ್‌ಬ್ರೈಟ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. Padma Shri-awardee-Sunil Khomari-diesಭಾರತೀಯ ನೃತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆಗಾಗಿ ಕೊಠಾರಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(1995) ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಗುಜರಾತ್ ಸಂಗೀತ ನಾಟಕ ಅಕಾಡೆಮಿ ಗೌರವ ಪುರಸ್ಕಾರ(2000), ಭಾರತ ಸರ್ಕಾರ ಪದ್ಮಶ್ರೀ (2001); ಮತ್ತು ನ್ಯೂಯಾರ್ಕ್, ಯುಎಸ್‌ಎ ನೃತ್ಯ ವಿಮರ್ಶಕರ ಸಂಘದ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್(2011) ಸಹ ಇವರಿಗೆ ಒಲಿದು ಬಂದಿತ್ತು. ಇದೇ ಅಲ್ಲದೆ ವಿದ್ವಾಂಸರಾಗಿ ಭಾರತೀಯ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರು ಸಂಗೀತ ನಾಟಕ ಅಕಾಡೆಮಿಯ ಚುನಾಯಿತ ಫೆಲೋ ಆಗಿದ್ದರು ಎಂದು ತಿಳಿದು ಬಂದಿದೆ.

key words : Padma Shri-awardee-Sunil Khomari-dies