ಕಣ್ಣೀರು ಹಾಕಿ ಕತ್ತು ಹಿಸುಕುತ್ತಿದ್ದಾರೆ: ದೇವರ ಮೇಲಾಣೆ ನಾನು ಯಾವುದೇ ಪತ್ರ ಬರೆದಿಲ್ಲ-ಹೆಚ್.ಡಿಕೆಗೆ ತಿರುಗೇಟು ನೀಡಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ…

Promotion

ಮಂಡ್ಯ,ನ,28,2019(www.justkannada.in):  ನಿನ್ನೆ ಕಿಕ್ಕೇರಿಯಲ್ಲಿ ಪ್ರಚಾರದ ವೇಳೆ, ಕಣ್ಣೀರು ಹಾಕಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಹೆಚ್.ಡಿಕೆ ಕಣ್ಣೀರು ಹಾಕಿ ಕತ್ತು ಹಿಸುಕುತ್ತಿದ್ದಾರೆ. ದೇವರ ಮೇಲಾಣೆ ನಾನು ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂದು ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಬಿಟ್ಟರೆ ಬೇರೆ ಒಕ್ಕಲಿಗರು ಯಾರು ಬೆಳೆಯಬಾರದು. ಕಣ್ಣೀರು ಹಾಕಿ ಅವರು ನನ್ನ ಕತ್ತು ಹಿಸುಕಲು ಹೊರಟಿದ್ದಾರೆ. ಕತ್ತು ಹಿಸುಕುವುದಾದರೆ ಅವರ ಮನೆಗೆ ಕರೆಸಿಕೊಂಡು ಹಿಸುಕಲಿ ಎಂದು ಕಿಡಿಕಾರಿದರು.

ಇನ್ನು ಎಚ್‍ಡಿಕೆ ಅವರು ನಾನು ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ದೇವರ ಆಣೆಗೂ ನಾನು ಅವರಿಗೆ ಪತ್ರ ಬರೆದಿಲ್ಲ. ಯಾರು ಬರೆದಿದ್ದಾರೆ? ಯಾಕೆ ಬರೆದಿದ್ದಾರೆ ಇದು ಅವರು ಸೃಷ್ಠಿಸಿಕೊಂಡಿರುವ ಕಥೆಯಿದು. ಅವರು ಮತ ಕೇಳಲಿ ಪಕ್ಷ ಬೆಳೆಸಲಿ ಆದರೆ ಸುಳ್ಳು ಹೇಳುವುದನ್ನ ನಿಲ್ಲಿಸಲಿ ಎಂದು  ಕೆ.ಸಿ ನಾರಾಯಣಗೌಡ ವಾಗ್ದಾಳಿ ನಡೆಸಿದರು.

Key words: K.R pete-by election- bjp candidate- narayanagowda-former cm –hd kumaraswamy