Saturday, September 12, 2026

BDA Apartments

ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯ ನಿದ್ದೆ, ಎಲೆಕ್ಷನ್ ಟೈಮ್ ನಲ್ಲಿ ಹೆಚ್ ಡಿಕ...
Home Front Page ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯ ನಿದ್ದೆ, ಎಲೆಕ್ಷನ್ ಟೈಮ್ ನಲ್ಲಿ ಹೆಚ್ ಡಿಕೆ ಕಣ್ಣೀರು ಸರ್ವೆ ಸಾಮಾನ್ಯ-...

ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯ ನಿದ್ದೆ, ಎಲೆಕ್ಷನ್ ಟೈಮ್ ನಲ್ಲಿ ಹೆಚ್ ಡಿಕೆ ಕಣ್ಣೀರು ಸರ್ವೆ ಸಾಮಾನ್ಯ- ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯ…

ಬೆಂಗಳೂರು,ನ,28,2019(www.justkannada.in):  ನಿನ್ನೆ ಕೆ.ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಮಗನ ಸೋಲನ್ನ ನೆನೆದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟ್ವಿಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಸಭೆ ಸಮಾರಂಭಗಳಲ್ಲಿ ಸಿದ್ಧರಾಮಯ್ಯ ನಿದ್ದೆ ಮಾಡುವುದು. ಚುನಾವಣೆ ಸಂದರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕುವುದು ಸರ್ವೆ ಸಾಮಾನ್ಯವಾಗಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು. ಈ ಕುರಿತು ಟ್ವೀಟ್ ಮಾಡಿರುವ ಕೆ.ಎಸ್. ಈಶ್ವರಪ್ಪ, ಮಳೆ ಬರುವ ಮುಂಚೆ ಗುಡುಗು ಬರುವುದು, ಬೆಂಕಿ ಹತ್ತುವ ಮುಂಚೆ ಹೊಗೆ ಬರುವುದು, ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯಗೆ ನಿದ್ದೆ, ಎಲೆಕ್ಷನ್ ಟೈಮ್ ನಲ್ಲಿ ಕುಮಾರಸ್ವಾಮಿಗೆ ಕಣ್ಣೀರು ಬರುವುದು ಸರ್ವೆ ಸಾಮಾನ್ಯ ಎಂದು ವ್ಯಂಗ್ಯವಾಡಿದ್ದಾರೆ.

ನಿನ್ನೆ ಕೆ.ಆರ್ ಪೇಟೆ ಕ್ಷೇತ್ರದ ಕಿಕ್ಕೇರಿಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹೆಚ್.ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನ ಸೋಲು ಮತ್ತು ಅನರ್ಹ ಶಾಸಕ ನಾರಾಯಣಗೌಡ ಅಂದು ಬರೆದಿದ್ದ ಪತ್ರ ಹಿಡಿದು ಕಣ್ಣೀರಿಟ್ಟಿದ್ದರು.

key words: Siddaramaiah – sleeping – meetings-hd kumaraswamy- tears – Common-minister- ks ehswarappa