ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಭಾರತದ ಜಿ.ಎಸ್.ಲಕ್ಷ್ಮೀ ಆಯ್ಕೆ

ದುಬೈ, ಮೇ 15, 2019 (www.justkannada.in): ಐಸಿಸಿಯ ಅಂತರ್‌ರಾಷ್ಟ್ರೀಯ ಮ್ಯಾಚ್ ರೆಫರಿಗಳ ಸಮಿತಿಗೆ ಭಾರತದ ಜಿ.ಎಸ್. ಲಕ್ಷ್ಮೀ ಆಯ್ಕೆಯಾಗಿದ್ದಾರೆ.

ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿರುವ ಮೊದಲ ಮಹಿಳಾ ಅಧಿಕಾರಿಯೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಲಕ್ಷ್ಮೀ ಶೀಘ್ರವೇ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದಿದ್ದಾರೆ.

ಈ ತಿಂಗಳಾರಂಭದಲ್ಲಿ ಕ್ಲೈರ್ ಪೊಲೊಸಾಕ್ ಪುರುಷರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಆಗಿದ್ದರು.

51ರ ಹರೆಯದ ಲಕ್ಷ್ಮೀ 2008-09ರಲ್ಲಿ ಮೊದಲ ಬಾರಿ ದೇಶೀಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಚ್ ರೆಫರಿ ಆಗಿ ಕೆಲಸ ಮಾಡಿದ್ದರು. ಆ ಬಳಿಕ 3 ಮಹಿಳಾ ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು.