ಸಿದ್ದರಾಮಯ್ಯ ಚೇಲಾಗಳಿಂದ ಸೋಬಾನೆ ಪದ: ‘ಜಮೀರ್ ಕಳ್ಳ’ ಎಂದ್ರು ಕೆ.ಎಸ್ ಈಶ್ವರಪ್ಪ….

ಹುಬ್ಬಳ್ಳಿ,ಮೇ,15,2019(www.justkannada.in):  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಹೇಳಿಕೆ ಕುರಿತು ಕಿಡಿಕಾರಿರುವ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಚೇಲಾಗಳು ಸೋ ಎಂದು ಸೊಬಾನೆ ಹಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಶಾಸಕ ಕೆ.ಎಸ್ ಈಶ್ವರಪ್ಪ,  ಸಿದ್ದರಾಮಯ್ಯ ಚೇಲಾಗಳು ಸಿದ್ದು ಮತ್ತೆ ಸಿಎಂ ಅಂತಾ  ಸೋಬಾನೆ ಹಾಡುತ್ತಿದ್ದರೇ ಸ್ವಾಭಿಮಾನಿಯಾಗಿ ಮಲ್ಲಿಕಾರ್ಜುನ ಖರ್ಗೆ  ಬಾಯಿ ಮುಚ್ಚಿಕೊಂಡು ಸುಮ್ಮನಿದ್ದಾರೆ.  ಸಮ್ಮಿಶ್ರ ಸರ್ಕಾರ ಒಂದು ರೀತಿ ಇಂಟ್ರುವಲ್ ಇದ್ದ ಹಾಗೆ. ಈಗ ಮೊದಲ ಭಾಗ ಮುಗಿದಿದೆ.  ಮೇ 23ರ ಬಳಿಕ ಪೂರ್ಣ ಪಿಕ್ಚರ್ ಸಿಗಲಿದೆ. ಮೇ 23ರ ಬಳಿಕ ಸಿದ್ದರಾಮಯ್ಯ ಡಿಕೆ ಶಿವ ಕುಮಾರ್ ಅವರನ್ನ ಹುಡಕಬೇಕು ಎಂದು ಲೇವಡಿ ಮಾಡಿದರು.

ಜಮೀರು  ಕಳ್ಳ, ವಾಚ್ ಮನ್ ಕೆಲಸಕ್ಕೆ ಇಟ್ಟುಕೊಳ್ಳಬಾರದು..

ಬಿಜೆಪಿ ಅಧಿಕಾರಕ್ಕೆ ಬಂದರೇ ನಾನು ವಾಚ್ ಮನ್ ಆಗಿ ಇರುತ್ತೇನೆ ಎಂದು ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ವಾಗ್ದಾಳಿ ನಡೆಸಿದ ಕೆ.ಎಸ್ ಈಶ್ವರಪ್ಪ, ಜಮೀರ್ ಒಬ್ಬ ಕಳ್ಳ. ವಾಚ್ ಮನ್ ಕೆಲಸಕ್ಕೆ ಇಟ್ಟುಕೊಳ್ಳಬಾರದು. ಬಿಎಸ್ ಯಡಿಯೂರಪ್ಪಗೆ ಹೇಳುತ್ತೇನೆ. ಕಳ್ಳನನ್ನ ವಾಚ್ ಮನ್ ಕ್ಲೀನಿಂಗ್ ಕೆಲಸಕ್ಕೆ ಇಟ್ಟುಕೊಳ್ಳಬೇಡಿ ಎಂದು ಕಿಡಿಕಾರಿದರು.

Key words: Sobane – Siddaramaiah- Chela-  Jameer -Thief – KS Easwarappa.