ಹೆಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ವಾಕ್ ಸಮರ: ಹೆಚ್.ಡಿ ದೇವೇಗೌಡರ ವಿರುದ್ದ ಬಿಜೆಪಿ ಮುಖಂಡ ವಾಗ್ದಾಳಿ…

ಹಾಸನ,ಮೇ,15,2019(www.justkannada.in):  ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ವಾಕ್ ಸಮರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಹಾಗೂ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎ.ಮಂಜು, ಹೆಚ್.ವಿಶ್ವನಾಥ್ ಬುದ್ದಿವಂತರು. ಅವರು ಈಗೆ ಮಾತನಾಡುತ್ತಿರಲಿಲ್ಲ. ಇದನ್ನ ನೋಡಿದರೇ ಸಿದ್ದರಾಮಯ್ಯ ಮತ್ತು ಹೆಚ್.ವಿಶ್ವನಾಥ್ ಅವರನ್ನ ಮುಗಿಸಲು ಹೆಚ್.ಡಿ ದೇವೇಗೌಡ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೆಚ್.ವಿಶ್ವನಾತ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಹೆಚ್.ಡಿ ದೇವೇಗೌಡರು ಮುಂದಾಗಿದ್ದಾರೆ.  ಈ ಮೂಲಕ ಕುರುಬ ಸಮುದಾಯವನ್ನ ಒಡೆಯಲು ಹೆಚ್.ಡಿಡಿ ಯತ್ನಿಸುತ್ತಿದ್ದಾರೆ ಎಂದು ಎ. ಮಂಜು ಕಿಡಿಕಾರಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ ಅವರ ಬೆಂಬಲಿಗರನ್ನ ಚಮಚಗಿರಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಸರಣಿ ಟ್ವಿಟ್ ಮಾಡಿ ಹೆಚ್.ವಿಶ್ವನಾಥ್ ವಿರುದ್ದ ಅಸಮಾಧಾನ ಹೊರ ಹಾಕಿದ್ದರು.

Key words: H. Vishwanath – Siddaramaiah –talk war- BJP leader-  against- HD Deve Gowda