ಕೊರೋನಾ ಸಂಕಷ್ಟ: ಮೈಸೂರು ಕಾಂಗ್ರೆಸ್ ಘಟಕದಿಂದ ಆರೋಗ್ಯ ಸಹಾಯವಾಣಿ ಆರಂಭ….

ಮೈಸೂರು,ಮೇ,1,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ  ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಮೈಸೂರು ಕಾಂಗ್ರೆಸ್ ಘಟಕ  ಆರೋಗ್ಯ ಸಹಾಯವಾಣಿ ಆರಂಭ ಮಾಡಿದೆ.jk

ನಗರದ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಅವರು ಆರೋಗ್ಯ ಸಹಾಯವಾಣಿ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದರು. ಆರ್.ಧ್ರುವನಾರಾಯಣ್‌ ಗೆ ಶಾಸಕರಾದ ಮಂಜುನಾಥ್, ಅನಿಲ್ ಚಿಕ್ಕಮಾದು, ಸಾಥ್ ನೀಡಿದರು. ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್‌ನಾಥ್, ಮಾಜಿ ಶಾಸಕರಾದ ವಾಸು, ಸೋಮಶೇಖರ್ ಸೇರಿ ಹಲವರು ಉಪಸ್ಥಿತರಿದ್ದರು.corona-health-helpline-mysore-congress-unit

ಕರೋನಾದಿಂದ ಬಳಲುತ್ತಿರುವವರಿಗೆ ಆನ್‌ಲೈನ್ ಮುಖಾಂತರ ಚಿಕಿತ್ಸೆ.ಆತ್ಮಸ್ಥೈರ್ಯ ತುಂಬಲು ಈ ಮೂಲಕ ಕಾಂಗ್ರೆಸ್ ಮುಂದಾಗಿದ್ದು, ವೈದ್ಯರು, ‌ಹೃದಯ ತಜ್ಞರು, ಮಕ್ಕಳ ತಜ್ಞರ ಫೋನ್ ನಂಬರ್ ರಿಲೀಸ್ ಮಾಡಿದೆ.

ಶ್ರೀನಿವಾಸ್- 9448060250

ಸಂತೋಷ್ – 9880999649

ವಸಂತ್ – 9945110129.

ಜನರಿಗೆ ಸೇವೆ ಸಲ್ಲಿಸಲು 9343305375 (ನಗರ ಕಾಂಗ್ರೆಸ್ ಘಟಕ) ಈ ಆನ್‌ಲೈನ್ ನಂಬರ್ ಬಿಡುಗಡೆ ಮಾಡಿದ್ದು, ಕೊರೋನಾದಿಂದ ಬಳಲುತ್ತಿರುವವರಿಗೆ  ಆನ್‌ಲೈನ್ ಮುಖಾಂತರ ಚಿಕಿತ್ಸೆ ನೀಡಲು ಕಾಂಗ್ರೆಸ್ ಮುಂದಾಗಿದೆ.

Key words: Corona -Health Helpline – Mysore -Congress Unit