ಬೈಕ್ ಗಳ ಮಧ್ಯೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು.

Promotion

ಯಾದಗಿರಿ,ಡಿಸೆಂಬರ್,26,2022(www.justkannada.in): ಬೈಕ್ ಗಳ ಮಧ್ಯೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆ ಕಕ್ಕೇರಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬಾಲಪ್ಪ, ಜಟ್ಟೆಪ್ಪ, ಪರಸಪ್ಪ ಮೃತಪಟ್ಟವರು. ಕೋಟೆಗುಡ್ಡ ಗ್ರಾಮದ ಬಾಲಪ್ಪ, ಜಟ್ಟಪ್ಪ ಇಬ್ಬರು ಕುರುಗಾಹಿಗಳು. ಕೊಡೆಕಲ್ ಗ್ರಾಮದ ಪರಸಪ್ಪ ತರಕಾರಿ ವ್ಯಾಪಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದು  ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Collision-between-bikes-Three died – spot.