ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ಟಾಸ್ಕ್ ಫೋರ್ಸ್ ಸಮಿತಿಯಿಂದ ವರದಿ ಸಲ್ಲಿಕೆ…

ಬೆಂಗಳೂರು,  ನವೆಂಬರ್,30,2020(www.justkannada.in):  ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡುವ ಕುರಿತು ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಟಾಸ್ಕ್ ಪೋರ್ಸ್ ಸಮಿತಿಯು ಇಂದು ತನ್ನ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿತು.logo-justkannada-mysore

ಈ ಸಮಿತಿಯ ಶಿಫಾರಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ   ಸಿಎಂ ಬಿಎಸ್ ಯಡಿಯೂರಪ್ಪ ಅವರು ಉನ್ನತ ಶಿಕ್ಷಣ ಸಚಿವ  ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಸೂಚಿಸಿದರು..

ಸಭೆಯಲ್ಲಿ ಮಾತನಾಡಿದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಸದಸ್ಯರು ಆದ ಪ್ರೊ. ಎಂ.ಕೆ. ಶ್ರೀಧರ್, 175 ವರ್ಷಗಳ ನಂತರ ಭಾರತ ಸರ್ಕಾರವು ತನ್ನದೇ ಆದ ಶಿಕ್ಷಣ ನೀತಿಯನ್ನು ರೂಪಿಸಿದೆ. ಈ ನೀತಿ ನಿರೂಪಣೆಯಲ್ಲಿ ಕರ್ನಾಟಕ ರಾಜ್ಯ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಹಾಗೂ ಸಮಾಜ ಹೆಚ್ಚಿನ ಒತ್ತು ನೀಡಬೇಕೆನ್ನುವುದು ಶಿಕ್ಷಣ ನೀತಿಯ ಆಶಯ ಎಂದು ವಿವರಿಸಿದರು.Report -Task Force Committee -Implementation -National Education Policy - State.

ಈ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ, ವಾಸುದೇವ ಅತ್ರೆ, ಪ್ರೊ. ಅನುರಾಗ್ ಬೆಹರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಸ್ಕ್ ಫೋರ್ಸ್ ಶಿಫಾರಸುಗಳ ಮುಖ್ಯಾಂಶಗಳು:

ಶಾಲಾ ಶಿಕ್ಷಣ

  • ಕೆ ಎಸ್‍ ಎಸ್‍ ಇಸಿ ಮತ್ತು ಎಸ್‍ ಎಸ್‍ ಎಸ್‍ ಎ ಗಳು ಶಾಲೆಗಳ ನಿಯಂತ್ರಣ ಮತ್ತು ಕಾರ್ಯಾಚರಣೆಗಳ ಪ್ರತ್ಯೇಕತೆಯನ್ನು ಖಾತರಿ ಪಡಿಸಿಕೊಳ್ಳುವುದು.
  • ಡಿಎಸ್‍ಇಆರ್‍ಟಿ ಯನ್ನು ಪುನರ್ ರಚಿಸುವುದು.
  • ಲಿಂಗಾಧಾರಿತ ಒಳಗೊಳ್ಳುವಿಕೆ ಮತ್ತು ದಿವ್ಯಾಂಗ ನಿಧಿಗಾಗಿ ಸಾಂಸ್ಥಿಕ ಸಾರ್ವಜನಿಕ ಜವಾಬ್ದಾರಿ (ಸಿಎಸ್‍ಆರ್) ಯಡಿಯಲ್ಲಿ ಹಣವನ್ನು ಆಕರ್ಷಿಸುವುದು.
  • ಸಾಕಷ್ಟು ಸಂಖ್ಯೆಯ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುವುದು.
  • ಎಲ್ಲಾ ರೀತಿಯ ವಿದ್ಯಾರ್ಥಿವೇತನಗಳಿಗೆ ಏಕ ವೇದಿಕೆಯನ್ನು ರೂಪಿಸುವುದು. ಅದರೊಂದಿಗೆ ದಿವ್ಯಾಂಗ. ವಿದ್ಯಾರ್ಥಿವೇತನವನ್ನು ಸ್ಥಾಪಿಸುವುದು.

ಉನ್ನತ ಶಿಕ್ಷಣ

  • ಹೊಸ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಕೆಎಸ್‍ಯು) ಕಾಯ್ದೆಯನ್ನು ಜಾರಿಗೆ ತರುವುದು.
  • ಮತ್ತೊಂದು ಹೊಸ ಕಾಯಿದೆಯನ್ನು ಜಾರಿಗೆ ತಂದು ಅದರನ್ವಯ ಕರ್ನಾಟಕ ಉನ್ನತ ಶಿಕ್ಷಣ ಆಯೋಗವನ್ನು (ಕೆಹೆಚ್‍ಇಸಿ) ಸ್ಥಾಪಿಸಬೇಕು.
  • ವಿಶೇಷ ಶೈಕ್ಷಣಿಕ ವಲಯ ಗಳನ್ನು ಗುರುತಿಸಿ ಸ್ಥಾಪಿಸಬೇಕು.
  • ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ (ಇಎಸ್‍ಡಿಜಿ) ಅನ್ವಯವಾಗುವ ಎಲ್ಲಾ ವಿದ್ಯಾರ್ಥಿವೇತನಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುವುದು.
  • ಸಂಲಗ್ನಿತ (affiliated) ಅಂಗಸಂಸ್ಥೆಗಳು ಮತ್ತು ಸ್ವಾಯತ್ತ (autonomous) ಕಾಲೇಜುಗಳ ಶ್ರೇಣೀಕೃತ ಸಬಲೀಕರಣ ಪ್ರಕ್ರಿಯೆಗೆ ಚಾಲನೆ ನೀಡುವುದು.

English summary…

Task force submits report on NEP implementation
Bengaluru, Nov. 30, 2020 (www.justkannada.in): The National Education Policy (NEP) task force, headed by former Chief Secretary S.V. Ranganath today submitted the report on the implementation of NEP in Karnataka.
The Govt. of India has come up with its own National Education Policy after 175 years. Karnataka has played an important role in preparing this. The overall objective of NEP is ensuring more stress on education by the government as well as society.Report -Task Force Committee -Implementation -National Education Policy - State.
Highlights
School Education
• KSSEC and SSA’s shall ensure separation of controlling of schools and operations;
• Reformation of DSERT;
• Attracting funds under Corporation Social Responsibility, for activities like gender inclusiveness and specially-abled funds;
• Establishing a sufficient number of special education zones;
• Providing a uniform platform for all kinds of scholarships and establishing scholarships for specially-abled;
Higher Education
• Implementing the new Karnataka State Universities (KSU) Act;
• Establishing Karnataka Higher Education Commission (KHEC) by introducing a new Act.
• Identify special educational zones and its establishment;
• Brining all scholarships applicable for economically and socially backward groups (ESBG) under a single platform;
• Commencing the process of ranked strengthening of affiliated and autonomous colleges

Keywords: NEP/ task forc/ NEP report

Keywords: Report -Task Force Committee -Implementation -National Education Policy – State.