Saturday, August 8, 2026

BDA Apartments

Home Front Page ಹೊಸ ವರ್ಷಾಚರಣೆ ಸಂಭ್ರಮ: ಚಾಮುಂಡಿ ಬೆಟ್ಟಕ್ಕೆ ಹರಿದು ಭಕ್ತ ಸಾಗರ….

ಹೊಸ ವರ್ಷಾಚರಣೆ ಸಂಭ್ರಮ: ಚಾಮುಂಡಿ ಬೆಟ್ಟಕ್ಕೆ ಹರಿದು ಭಕ್ತ ಸಾಗರ….

ಮೈಸೂರು,ಜ,1,2020(www.justkannada.in): ಇಂದು ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೇ ಲಗ್ಗೆ ಇಡುತ್ತಿದ್ದು ವರ್ಷದ ಮೊದಲ ದಿನ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.

ಬೆಳಿಗ್ಗೆಯಿಂದಲೇ ಭಕ್ತ ಸಾಗರ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹೊಸ ವರ್ಷ ಸ್ವಾಗತ ಕೋರಿದ್ದಾರೆ.  ಮುಂಜಾನೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ತಾಯಿ  ದರ್ಶನ ಪಡೆಯುತ್ತಿದ್ದಾರೆ.

ಇಂದು ಪ್ರವಾಸಿಗರು ಹಾಗೂ ಸ್ಥಳಿಯರಿಂದಲೇ ಚಾಮುಂಡೇಶ್ವರಿ ದೇವಾಲಯ ತುಂಬಿದ್ದು , ಹೊಸ ವರ್ಷದಂದು ಹೊಸ ಸಂಕಲ್ಪದೊಂದಿಗೆ  ಭಕ್ತಸಾಗರ ಚಾಮುಂಡೇಶ್ವರಿ ದೇವಿಗೆ ನಮಿಸಿದೆ.

key words: New Year- Chamundi hill – Devotees –special worship