ಮೈಸೂರಿನಲ್ಲಿ ಹೊಸವರ್ಷ ಸಂಭ್ರಮಾಚರಣೆ ಹಿನ್ನೆಲೆ; ಪೆಟ್ರೋಲ್ ಗಾಗಿ ಗಲಾಟೆ: ಬೈಕ್ ಗಳ ಮೇಲೆ ಕಾರು ನುಗ್ಗಿಸಿದ ಚಾಲಕನ ಬಂಧನ

ಮೈಸೂರು,ಜ,1,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿದ್ದು ಈ ನಡುವೆ ನಿನ್ನೆ ಮಧ್ಯರಾತ್ರಿ ಪೆಟ್ರೋಲ್ ಗಾಗಿ ವಾಹನ ಸವಾರರು ಮತ್ತು ಯುವಕರಿಂದ ಗಲಾಟೆಯಾಗಿರುವ ಘಟನೆ ನಡೆದಿದೆ.

ಮೈಸೂರಿನ ಮೆಟ್ರೋಪೋಲ್ ಬಳಿಯ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಹೊಸವರ್ಷಾಚರಣೆ ಹಿನ್ನೆಲೆ ನಿನ್ನೆ ಮಧ್ಯರಾತ್ರಿ ಪೆಟ್ರೋಲ್ ಗಾಗಿ ಮೆಟ್ರೋಪೋಲ್ ಬಳಿಯ ಪೆಟ್ರೋಲ್ ಬಂಕ್  ಮುಂದೆ  ವಾಹನ ಸವಾರರು ಕ್ಯೂ ನಿಂತಿದ್ದರು. ಈ ವೇಳೇ ಪೆಟ್ರೋಲ್ ಗಾಗಿ ವಾಹನ ಸವಾರರು, ಯುವಕರು ಮುಗಿಬಿದ್ದುದ್ದು ಗಲಾಟೆ ನಡೆದಿದೆ.

ಇದೇ ಸಮಯದಲ್ಲಿ ಕುಡಿತದ ಮತ್ತಿನಲ್ಲಿ ವ್ಯಕ್ತಿಯೋರ್ವ  ಬೈಕ್ ಗಳ ಮೇಲೆ ಕಾರು ನುಗ್ಗಿಸಿದ್ದು ಪರಿಣಾಮ ಎರಡು ದ್ವಿಚಕ್ರ ವಾಹನಗಳೂ ಜಖಂ ಆಗಿವೆ.  ಸ್ಥಳಕ್ಕೆ ದೇವರಾಜ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು ಬಳಿಕ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ದೇವರಾಜ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

key words: new Year- Celebration – Mysore-Patrol- Driver- arrest