Saturday, August 8, 2026

BDA Apartments

Home Cinema ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮುಂಬೈ, ಜುಲೈ 31, 2020 (www.justkannada.in): ದಿನಕ್ಕೊಂದು ತಿರುವು ಪಡೆಯುತ್ತಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದೀಗ ಹಣಕಾಸು ವಹಿವಾಟಿನತ್ತ ಪ್ರಕರಣ ತಿರುಗಿದೆ.

ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಯಿಂದ ಅನುಮಾನಸ್ಪದ ರೀತಿಯಲ್ಲಿ 15 ಕೋಟಿ ರೂ. ಡ್ರಾ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

15 ಕೋಟಿ ರೂ. ಡ್ರಾ ಆಗಿರುವ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಬಾಲಿವುಡ್ ನಟಿ ರೇಹಾ ಚಕ್ರವರ್ತಿ ಡ್ರಾ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಸುಶಾಂತ್ ಸಿಂಗ್ ನಿಧನವಾಗಿ ಸುಮಾರು 2 ತಿಂಗಳು ಕಳೆದ ನಂತರ ತಂದೆ ದೂರು ಕೊಟ್ಟಿರುವುದು ಮತ್ತೊಂದೆಡೆ ಅನುಮಾನಕ್ಕೆ ಕಾರಣವಾಗಿದೆ.