Wednesday, September 16, 2026

BDA Apartments

NEET-UG ಮರು ಪರೀಕ್ಷೆ: ದೇಶದಲ್ಲಿ ಟೆಲಿಗ್ರಾಂಗೆ ತಾತ್ಕಾಲಿಕ ನಿರ್ಬಂಧ BDA JK_Adv BDA Adv
Home Front Page NEET-UG ಮರು ಪರೀಕ್ಷೆ: ದೇಶದಲ್ಲಿ ಟೆಲಿಗ್ರಾಂಗೆ ತಾತ್ಕಾಲಿಕ ನಿರ್ಬಂಧ

NEET-UG ಮರು ಪರೀಕ್ಷೆ: ದೇಶದಲ್ಲಿ ಟೆಲಿಗ್ರಾಂಗೆ ತಾತ್ಕಾಲಿಕ ನಿರ್ಬಂಧ

ನವದೆಹಲಿ, ಜೂನ್, 16,2026 (www.justkannada.in):  ವೈದ್ಯಕೀಯ ಪ್ರವೇಶ ಪರೀಕ್ಷೆ  ನೀಟ್ ಯುಜಿ ಮರು ಪರೀಕ್ಷೆ ಜೂನ್ 21 ರಂದು ನಡೆಯಲಿದ್ದು ಅಕ್ರಮ ತಡೆಗಾಗಿ ಮುಂಜಾಗ್ರತೆ ಕ್ರಮವಾಗಿ ಜನಪ್ರಿಯ ‘ಟೆಲಿಗ್ರಾಮ್’ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ವದಂತಿಗಳು ಹರಡದಂತೆ ತಡೆಯಲು ಅತ್ಯಂತ ಪಾರದರ್ಶಕ ಹಾಗೂ ಸುರಕ್ಷಿತವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ  ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಆಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಕುರಿತು ಅಧಿಕೃತ ನಿರ್ದೇಶನ ನೀಡಿದ್ದು ದೇಶದಲ್ಲಿ ಜೂನ್ 22, 2026 ರವರೆಗೆ ಟೆಲಿಗ್ರಾಮ್ ಸೇವೆಗಳು ತಾತ್ಕಾಲಿಕವಾಗಿ ನಿಷೇಧಿಸಲ್ಪಟ್ಟಿದೆ.NEET BDA JK_Adv BDA Adv

ಜೂನ್ 21 ರಂದು ದೇಶಾದ್ಯಂತ ನೀಟ್ (UG) ಮರು ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.UG ಮರು ಪರೀಕ್ಷೆ exam

ಈ ಹಿಂದೆ ನಡೆದಿದ್ದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆ ಪರೀಕ್ಷೆಯನ್ನ ರದ್ದು ಮಾಡಲಾಗಿತ್ತು. ನಂತರ ಪರೀಕ್ಷೆ  ಅಕ್ರಮಕ್ಕೆ ಸಂಬಂಧಿಸಿದಂತೆ ಹಲವರನ್ನ ಬಂಧಿಸಲಾಗಿದ್ದು ಜೂನ್ 21ಕ್ಕೆ ಮರುಪರೀಕ್ಷೆ ನಿಗದಿಯಾಗಿದೆ.ದೇಶದಲ್ಲಿ ಟೆಲಿಗ್ರಾಂಗೆ ತಾತ್ಕಾಲಿಕ ನಿರ್ಬಂಧ jk02_new jk02 new

Key words: NEET-UG, Exam,  Telegram, temporarily, banned, country