Saturday, August 1, 2026

BDA Apartments

Home Front Page 13 ದಿನಗಳ ನಂತರ ಖಾತೆ ವಹಿಸಿಕೊಂಡ ಸಚಿವ ಕೃಷ್ಣಭೈರೇಗೌಡ

13 ದಿನಗಳ ನಂತರ ಖಾತೆ ವಹಿಸಿಕೊಂಡ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜೂನ್,16,2026 (www.justkannada.in): ಪೂರ್ಣ ಪ್ರಮಾಣದ ಖಾತೆ ನೀಡಿಲ್ಲ ಎಂಧು ಅಸಮಾಧಾನಗೊಂಡು ಖಾತೆಯಿಂದ ದೂರ ಉಳಿದಿದ್ದ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ಇದೀಗ ಖಾತೆಯನ್ನ ವಹಿಸಿಕೊಂಡಿದ್ದಾರೆ.

ಖಾತೆ ಹಂಚಿಕೆ ಮಾಡಿದ 13 ದಿನಗಳ ನಂತರ  ಸಚಿವ ಕೃಷ್ಣಭೈರೇಗೌಡ ನಗರಾಭಿವೃದ್ದಿ ಖಾತೆಯನ್ನ ವಹಿಸಿಕೊಂಡಿದ್ದಾರೆ. ಬಿಡಿಎ ಬಿಎಂಆರ್ ಡಿಎಯನ್ನು ಬೆಂಗಳೂರು ಅಭಿವೃದ್ದಿ ಖಾತೆ ಜೊತೆಗೆ ನೀಡಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು.

ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಸಚಿವ ಕೃಷ್ಣಭೈರೇಗೌಡ ಮಾತುಕತೆ ನಡೆಸಿದ್ದು ಇದೀಗ ಇಂದು ಬೆಂಗಳೂರು ನಗರಾಭಿವೃದ್ದಿ ಖಾತೆ ವಹಿಸಿಕೊಂಡಿದ್ದಾರೆ.

ಇಂದು ಜಿಬಿಎ ಮುಖ್ಯಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಸಭೆಯಲ್ಲಿ  ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪಾಲ್ಗೊಂಡಿದ್ದಾರೆ.

Key words: Minister, Krishna Bhairegowda, takes, charge, after, 13 days