ಚಿತ್ರದುರ್ಗ, ಅಕ್ಟೋಬರ್,31,2026 (www.justkannada.in): 8 ರೂಪಾಯಿ ಹಾಲಿನ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಈ ಮಧ್ಯೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. 
ಈ ಕುರಿತು ಮಾತನಾಡಿರುವ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮೂಲಕ ರಾಜ್ಯದ ಜನರ ಮೇಲೆ ಹೊರೆ ಹಾಕಿದೆ. ರೈತರ ಹಾಲಿಗೆ 7 ರೂ ಪ್ರೋತ್ಸಾಹ ಧನ ನೀಡದೆ ಜನರಿಗೆ ಹೊರೆ ಹಾಕಿದೆ. ಕಾಂಗ್ರೆಸ್ ಆಡಳಿತದಲ್ಲಿ ನಾಲ್ಕನೇ ಬಾರಿ ದರ ಏರಿಕೆ ಆಗಿದೆ. ಸರ್ಕಾರ ಬಹಳ ದಿನ ಇರಲ್ಲ ಪಾಪರ್ ಆಗಿದೆ. ಎಂದು ವಾಗ್ದಾಳಿ ನಡೆಸಿದರು.
ಎಸ್ ಐಆರ್ ಕ್ಲಿಯರ್ ಆಗಿದೆ. ಸರಿಯಾಗಿಯೇ ನಡೆಯುತ್ತಿದೆ. ಬ್ಯಾಲೆಟ್ ನಲ್ಲೇ ಎಂಎಲ್ ಸಿ ಎಲೆಕ್ಷನ್ ನಡೆಯಿತು, ಬಿಜೆಪಿ ಗೆದ್ದಿತು. ಕಾಂಗ್ರೆಸ್ ಪಕ್ಷ ಎಲ್ಲೂ ಗೆಲ್ಲಲು ಆಗುತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಇರಲ್ಲ ಅದಕ್ಕಾಗಿ ಕಿತಾಪತಿ ಮಾಡುತ್ತಿದ್ದಾರೆ .ಡಿಕೆಶಿ ಸಿಎಂ ಆದ ಬಳಿಕ ಮ್ಯಾಜಿಕ್ ಎಂದು ಬಿಂಬಿಸಿದರು. ಈಗ ನೋಡಿದರೇ ಠುಸ್ ಪಟಾಕಿ ಆಗಿದೆ. ಸ್ವತಃ ಸಿಎಂ ಸಾರಿಗೆ ಬಸ್ ಡೀಸೆಲ್ ಗೆ ಕಾಸಿಲ್ಲ ಎಂದಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರು ಪರಿಹಾರ ಕೇಳಿದ್ದಾರೆ ಖಜಾನೆ ಖಾಲಿ ಆಗಿದೆ ಎಂದು ಕಬ್ಬು ಬೆಳೆಗಾರರಿಗೆ ಹೇಳಿದ್ದಾರೆ. ಕಳೆದ ಅಸೆಂಬ್ಲಿ ವೇಳೆ ಹಣಕಾಸು ಇಲಾಖೆ ಖಾಲಿ ಪ್ರದರ್ಶನ ಬ್ಯಾಂಕ್ ಗಳಲ್ಲಿ ಸಾಲ ಕೊಡದ ಪರಿಸ್ಥಿತಿ ಇದೆ ಎಂದಿದ್ದಾರೆ ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
Milk price, hike, R. Ashok, Attack, on, the government







