Tuesday, September 22, 2026

BDA Apartments

ಎನ್’ಡಿಎ ಎಂದರೆ ‘ನೋ ಡೇಟಾ ಅವೈಲಬಲ್’: ಹೊಸ ವ್ಯಾಖ್ಯಾನ ನೀಡಿದ ರಾಹುಲ್ ಗಾಂಧಿ B...
Home Front Page ಎನ್’ಡಿಎ ಎಂದರೆ ‘ನೋ ಡೇಟಾ ಅವೈಲಬಲ್’: ಹೊಸ ವ್ಯಾಖ್ಯಾನ ನೀಡಿದ ರಾಹುಲ್ ಗಾಂಧಿ

ಎನ್’ಡಿಎ ಎಂದರೆ ‘ನೋ ಡೇಟಾ ಅವೈಲಬಲ್’: ಹೊಸ ವ್ಯಾಖ್ಯಾನ ನೀಡಿದ ರಾಹುಲ್ ಗಾಂಧಿ

ಬೆಂಗಳೂರು, ಜುಲೈ 24, 2022 (www.justkannada.in): ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ  ಟ್ವಿಟರ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್, ಎನ್ ಡಿಎ ಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ.  ಎನ್ ಡಿ ಎ ಎಂದರೆ ‘ನೋ ಡೇಟಾ ಅವೈಲಬಲ್’ ಎಂದು ವ್ಯಂಗ್ಯವಾಡಿದ್ದಾರೆ. ಏನೇ ಪ್ರಶ್ನೆ ಕೇಳಿದರೂ ಈ ಸರ್ಕಾರದ ಬಳಿ ಯಾವುದಕ್ಕೂ ಉತ್ತರವಿರುವುದಿಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಇದು ‘ನೋ ಡೇಟಾ ಅವೈಲಬಲ್’ ಸರ್ಕಾರ ಎಂದು ಕುಟುಕಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಯಾರೂ ಸತ್ತಿಲ್ಲ. ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲೂ ಯಾರೂ ಮೃತಪಟ್ಟಿಲ್ಲ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.