ಇಮ್ಮಾವು ಗ್ರಾಮಸ್ಥರಿಂದ ಗ್ರಾಪಂ ಚುನಾವಣಾ ಬಹಿಷ್ಕಾರ…!

ಮೈಸೂರು,ಡಿಸೆಂಬರ್,17,2020(www.justkannada.in) : ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ಭರವಸೆ ನೀಡದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಇಮ್ಮಾವು ಗ್ರಾಮಸ್ಥರು ಗ್ರಾಪಂ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.Teachers,solve,problems,Government,bound,Minister,R.Ashokಬುಧವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಗ್ರಾಮಸ್ಥರು ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ. ನಾಮಪತ್ರ ಸಲ್ಲಿಸುವಂತೆ ತಾಲೂಕು ಆಡಳಿತ ಹಾಗೂ ಪೊಲೀಸರು ಮನವಿ ಮಾಡಿ ಮನ ಒಲಿಸಲು ಯತ್ನಿಸಿದರು.

ತಾಲೂಕು ಆಡಳಿತ ಹಾಗೂ ಚುನಾವಣಾಧಿಕಾರಿಗಳ ಸಂದಾನ ವಿಫಲಗೊಂಡಿದೆ. ಈ ವೇಳೆ ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದೆ.

Nanjangud,hulimaavu,Grapham,villagers,Grapham,election,boycottಇಮ್ಮಾವು ಗ್ರಾಮದ ಜನರು ಕಳೆದ 23 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಗ್ರಾಪಂ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ಇದುವರೆಗೂ 16 ವಾರ್ಡ್ ಗಳ ಪೈಕಿ 13 ವಾರ್ಡ್ ಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದೆ.

Nanjangud,hulimaavu,Grapham,villagers,Grapham,election,boycott

ಇಮ್ಮಾವು ಗ್ರಾಮದ 3 ವಾರ್ಡ್ ಗಳಿಗೆ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. ಜಿಲ್ಲಾಡಳಿತದ ಮನವಿ ಮಾಡಿದರೂ, ಗ್ರಾಮಸ್ಥರು ಮನವಿಯನ್ನು ಒಪ್ಪಲಿಲ್ಲ ಎಂದು ತಿಳಿದು ಬಂದಿದೆ.

English summary….

Immavu Villagers boycot GP elections

Mysuru, Dec. 17, 2020 (www.justkannada.in): The residents of Hulimavu Gram Panchayat, in Nanjangud Taluk, have decided to boycott the Gram Panchayat elections following the refusal of assuring jobs for locals in the Asian Paints factory.

Wednesday was the last day to submit the nominations. But nobody submitted nominations, whereas the Taluk Administration and the local police tried to convince the villagers to submit nominations. While their efforts in convincing the villagers failed, it evoked an exchange of words between the police led by the Tahasildar Mahesh Kumar and the villagers.

The Immavu villagers were protesting for the last 23 days and had also warned boycotting the GP elections. Out of the total 16 wards, nominations have been submitted in only 13 wards.

Keywords: Immavu village/ villagers boycot GP elections

key words : Nanjangud-hulimaavu-Grapham-villagers-Grapham-election- boycott