ಬಿಳಿಗಿರಿರಂಗನಾಥ ಹುಲಿಸಂರಕ್ಷಿತ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ : ಮೊಬೈಲ್ ಆ್ಯಪ್ ಕಣ್ಗಾವಲಿನಲ್ಲಿ ಪ್ರವಾಸಿಗರು….

ಚಾಮರಾಜನಗರ,ಡಿಸೆಂಬರ್,17,2020(www.justkannada.in): ಬಿಳಿಗಿರಿ ರಂಗನಾಥ ಹುಲಿಸಂರಕ್ಷಿತ ಪ್ರದೇಶದದಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೌದು, ಇನ್ಮುಂದೆ ಬಿಆರ್ ಟಿಗೆ ಭೇಟಿ ನೀಡುವ ಪ್ರವಾಸಿಗರು ಟೈಗರ್ ಮೊಬೈಲ್ ಆಪ್ ಕಣ್ಗಾವಲಿನಲ್ಲಿ ಇರಲಿದ್ದಾರೆ. Teachers,solve,problems,Government,bound,Minister,R.Ashok

ಅರಣ್ಯ ಮೀಸಲು ಪ್ರದೇಶದಿಂದ ಹಾದು ಹೋಗುವ ದಾರಿಯಲ್ಲಿ ನಡೆಯುವ ಕೃತ್ಯಗಳಿಗೆ ಕಡಿವಾಣ  ಹಾಕಲು ಟೈಗರ್  ಮೊಬೈಲ್ ಆ್ಯಪ್ ಅಳವಡಿಕೆ ಮಾಡಿಕೊಳ್ಳಲಾಗಿದ್ದು , ಈ ಆ್ಯಪ್ ಪ್ರವಾಸಿಗರ ಸುರಕ್ಷತೆಗೂ ಸಹಾರಿಯಾಗಲಿದೆ.

ಬಿಆರ್ ಟಿಯಲ್ಲಿ ನಡೆದ ಮಾದ್ಯಮ ಕಾರ್ಯಾಗಾರದಲ್ಲಿ ಬಿಆರ್ ಟಿ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್‌ ಈ ಕುರಿತು  ಮಾಹಿತಿ ನೀಡಿದ್ದಾರೆ. ಬಿ ಆರ್ ಟಿ ಗೆ ಎಂಟ್ರಿ ಕೊಡುವ ಮುನ್ನ ಪ್ರತಿ ವಾಹನ ಸವಾರರ ಸಂಪೂರ್ಣ ಮಾಹಿತಿ ಆ್ಯಪ್ ನಲ್ಲಿ ಅಪ್ಲೊಡ್ ಮಾಡಲಾಗುತ್ತದೆ. ಪ್ರವಾಸಿಗರ ವಾಹನದ ಸಂಖ್ಯೆ, ಮೊಬೈಲ್ ನಂಬರ್‌‌, ಪ್ರವಾಸಿಗರ ಸಂಖ್ಯೆ ವಿಳಾಸ ಇತ್ಯಾದಿ ಮಾಹಿತಿ ನಮೂದನೆ ಮಾಡಲಾಗುತ್ತದೆ. ಪ್ರವಾಸಿಗರಿಗೆ  ಕ್ಯೂಆರ್ ಕೋಡ್ ಒಳಗೊಂಡ ಟಿಕೆಟ್ ನೀಡಲಾಗುತ್ತಿದೆ. ದಾರಿ ಮಧ್ಯದಲ್ಲಿ ಏನಾದರೂ ಅನಾಹುತ, ವಾಹನ ಸಮಸ್ಯೆ, ತಪ್ಪಿಸಿಕೊಂಡಿದ್ದರೆ ಅಂತಹವರನ್ನು ಸುಲಭವಾಗಿ ಪತ್ತೆಹಚ್ಚಲು ಆ್ಯಪ್ ಸಹಕಾರಿಯಾಗಲಿದೆ ಎಂದು ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಅರಣ್ಯ ಸಂರಕ್ಷಣೆ, ಬೆಳವಣಿಗೆ ತೊಡಕಾಗಿರುವ ಲಂಟಾನ ತೆರವಿಗೆ ಕ್ರಮ….

ಅರಣ್ಯ ಸಂರಕ್ಷಣೆ, ಬೆಳವಣಿಗೆ ತೊಡಕಾಗಿರುವ ಲಂಟಾನ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ. ನರೆಗಾ ಯೋಜನೆ ಬಳಸಿಕೊಂಡು ಲಂಟಾನ ತೆರವಿಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಹುಲ್ಲು ಹಾಗು ಇತರ ಮರ ಗಿಡಗಳ ಬೆಳವಣಿಗೆ ಲಂಟಾನ ಸಸ್ಯ ಪ್ರಭೇದ ತೊಡಕಾಗಿದೆ. ಕಾಡಿಗೆ ಬೆಂಕಿ ಬಿದ್ದಾಗ ಲಂಟಾನದಿಂದ ಹೆಚ್ಚು ಅಪಾಯಕಾರಿ. ಹುಲ್ಲು ಬೆಳೆವಣಿಗೆಗೆ ತೊಡಕಾಗಿರುವ ಲಂಟಾನ ವಿದೇಶಿ ಪ್ರಭೇದವಾಗಿದ್ದು ಅದನ್ನ ತೆರವು ಮಾಡಿ ಹುಲ್ಲುಗಾವಲು ಪ್ರದೇಶ ನಿರ್ಮಾಣಕ್ಕೆ ಒತ್ತು  ನೀಡಲಾಗುತ್ತದೆ. ಇದರಿಂದ ಸಸ್ಯಹಾರಿ ಪ್ರಾಣಿಗಳ ಆಹಾರಕ್ಕೆ ಅನುಕೂಲವಾಗಲಿದೆ.BCCF-Manoj Kumar-Journalist-Vinod Kumar nayaka-leader-Good luck

ಆನೆ, ಕಾಡಮ್ಮೆ, ಜಿಂಕೆ, ಸಾಂಬರ ಮುಂತಾದ ಪ್ರಾಣಿ ಹೆಚ್ಚಾಗಲು ಸಹಕಾರಿಯಾಗಲಿದೆ.  ಜೊತೆಗೆ ಆಹಾರ ಹರಸಿ ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳ ಸಂಖ್ಯೆ ಕೂಡ ಕಡಿಮೆಯಾಗುವ ಸಾಧ್ಯತೆ. ಜೊತೆಗೆ ಆದಿವಾಸಿಗಳಿಗೆ ಲಂಟಾನ ಪೀಠೋಪಕರ ತಯಾರಿಕೆಗೂ ಉತ್ತೇಜನ ನೀಡಲಾಗುವುದು. ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಚಾಮರಾಜನಗರ ನಗರ ವೃತ್ತದ ಬಿಸಿಎಫ್ ಮನೋಜ್ ಕುಮಾರ್ ಮಾಹಿತಿ ಮಾಹಿತಿ ನೀಡಿದರು.

Key words: Tourists -visiting -Tiger Mobile App –Surveillance-BRT