ಹಲ್ಲೆಗೊಳಗಾಗಿದ್ದ ಮೈಸೂರು ಜಿ.ಪಂ ಅಧ್ಯಕ್ಷರ ವಾಹನ ಚಾಲಕ ಚಿಕಿತ್ಸೆ ಫಲಿಸದೆ ಸಾವು…

ಮೈಸೂರು,ಫೆ,9,2020(www.justkannada.in):  ಮೈಸೂರು ಜಿ.ಪಂ ಅಧ್ಯಕ್ಷರ ವಾಹನ ಚಾಲಕನಿಗೆ ಮಚ್ಚೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಸುನೀಲ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್  ಅಧ್ಯಕ್ಷೆ ಪರಿಮಳ‌ ಶ್ಯಾಂ ಅವರ ಕಾರಿನ ಡ್ರೈವರ್ ಆಗಿದ್ದ ಸುನೀಲ್ ಮೇಲೆ  ಹೆಚ್.ಡಿ ಕೋಟೆಯ ಅಂತರಸಂತೆ ಬೇಕರಿ ಬಳಿ ರಾತ್ರಿ  ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು. ಸುನೀಲ್ ಬೇಕರಿಯಲ್ಲಿದ್ದ ವೇಳೆ ರವಿ ಎಂಬಾತನಿಂದ ಹಲ್ಲೆ ನಡೆದಿತ್ತು. ಮಾರಣಾಂತಿಕವಾಗಿ ಗಾಯಗೊಂಡ ಸುನೀಲ್‌ಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಸುನೀಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಲ್ಲೆ ಮಾಡಿದ್ದ ರವಿ ಸುನೀಲ್‌ಗೆ ಸಂಬಂಧಿಯಾಗಿದ್ದು, ಹಣ ಕಾಸಿನ ವ್ಯವಹಾರದಲ್ಲಿ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹೆಚ್.ಡಿ.ಕೋಟೆಯ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore -ZP president- driver -dies – assault