ವಾರ್ಡ್ ನಂ.18ರ ಉಪಚುನಾವಣೆ ಹಿನ್ನೆಲೆ: ಕ್ವಾಲಿಟಿ ಇಲ್ಲದ ಶಾಯಿ ಬಳಕೆ: ಬೇಸರ ವ್ಯಕ್ತಪಡಿಸಿದ ಮತದಾರ…

ಮೈಸೂರು,ಫೆ,9,2020(www.justkannada.in):  ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 18ರ ಉಪಚುನಾವಣೆ ನಡೆಯುತ್ತಿದ್ದು ಈ ನಡುವೆ ಮತದಾನದ ವೇಳೆ ಕಡಿಮೆ ಗುಣಮಟ್ಟದ ಶಾಯಿ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ವಾರ್ಡ್ ನಂಬರ್ 18ರ ಉಪ ಚುನಾವಣೆ ಹಿನ್ನೆಲೆ, ಯಾದವಗಿರಿಯ ಸುನಂದ ಆಕಾಡೆಮಿಯ ಮತಗಟ್ಟೆ ಸಂಖ್ಯೆ 185 ರಲ್ಲಿ ಮತದಾರರೊಬ್ಬರಿಗೆ ಹಾಕಿದ್ದ ಶಾಯಿ ವೋಟಿಂಗ್ ನಂತರ ಅಳಿಸಿ ಹೋಗಿದೆ. ವಯೋವೃದ್ದ ಸತ್ಯನಾರಾಯಣರಾವ್ ಗೆ ಹಾಕಲಾಗಿದ್ದ ಶಾಯಿ ಅಳಿಸಿ ಹೋಗಿದೆ.   ಹೌದು, ವೋಟಿಂಗ್ ಮಾಡಿದ ಕೆಲವೇ ಕ್ಷಣಗಳಲ್ಲಿ ಶಾಯಿಯೇ ಮಾಯವಾಗುತ್ತಿದೆ. ಮತದಾನ ವೇಳೆ ಅಧಿಕಾರಿಗಳು ಗುಣಮಟ್ಟವಲ್ಲದ ಶಾಯಿಯನ್ನ ಬಳಕೆ ಮಾಡುತ್ತಿದ್ದಾರೆ.

ಒಬ್ಬರಿಗೆ ಕಿರುಬೆರಳು ಮತ್ತೊಬ್ಬರಿಗೆ ಉಂಗುರದ ಬೆರಳಿಗೆ ಮತಗಟ್ಟೆ ಅಧಿಕಾರಿಗಳು ಶಾಯಿ ಹಾಕುತ್ತಿದ್ದು  ಕ್ವಾಲಿಟಿ ಇಲ್ಲದ ಶಾಯಿ ಹಾಕಿದ್ದಕ್ಕೆ ಅಧಿಕಾರಿಗಳ ವಿರುದ್ದ ವಯೋವೃದ್ದ ಸತ್ಯನಾರಾಯಣರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

Key words: mysore-Ward No. 18 -by-election- Without Quality- ink -use.