2022-23ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಪ್ರೋಗ್ರಾಂಗಳ ತರಗತಿ, ಪರೀಕ್ಷೆಗಳನ್ನ ಮುಂದೂಡಿ ಮೈಸೂರು ವಿವಿ ಆದೇಶ..

ಮೈಸೂರು,ಜುಲೈ,20,2023(www.justkannada.in): 2022-23ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಪ್ರೋಗ್ರಾಂಗಳ ತರಗತಿ, ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ ಮೈಸೂರು ವಿಶ್ವ ವಿದ್ಯಾನಿಲಯ ಆದೇಶ  ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ವಿವಿ ಕುಲಸಚಿವರು, ಸ್ನಾತಕ ಪ್ರೋಗ್ರಾಂಗಳ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳ ಕೊನೆ ದಿನಾಂಕ: 05.08.2023ಕ್ಕೆ ನಿಗಧಿಪಡಿಸಲಾಗಿತ್ತು. 2023-24ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರದ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಲು ಮತ್ತು ಸ್ನಾತಕೋತ್ತರ ಪ್ರೊಗ್ರಾಂಗಳ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳನ್ನು ಒಂದೇ ಸಮಯದಲ್ಲಿ ಪ್ರಾರಂಭಿಸಲು, ಸ್ನಾತಕ ಕಾಲೇಜಿನ ಪ್ರಾಂಶುಪಾಲರುಗಳ ಒಪ್ಪಿಗೆ ಪಡೆದು, ಮಾನ್ಯ ಕುಲಪತಿಗಳ ಅನುಮೋದನೆ ಮೇರೆಗೆ ಈ ಹಿಂದೆ ನಿಗಧಿಪಡಿಸಿದ್ದ ತರಗತಿಗಳ ಅವಧಿಯನ್ನು ಕಡಿತಗೊಳಿಸಿ, ದಿನಾಂಕ: 22.07.2022 ಕ್ಕೆ ನಿಗಧಿಪಡಿಸಿ ಉಲ್ಲೇಖಿತ(2) ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ, ಪರೀಕ್ಷೆಗಳು ದಿನಾಂಕ 24.07.2023 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು.

ಈ ಮಧ್ಯೆ ದಿನಾಂಕ 17.07.2023 ರಂದು ಮತ್ತು ದಿನಾಂಕ: 20.07.2023 ರಂದು ವಿದ್ಯಾರ್ಥಿ ಸಂಘಟನೆಗಳು ತರಗತಿಗಳ ಕೊನೆ ದಿನಾಂಕವನ್ನು 15 ದಿನಗಳ ಕಾಲ ಮುಂದೂಡಲು ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದರಿಂದ ಮತ್ತು ಕುಲಸಚಿವ(ಪರೀಕ್ಷಾಂಗ) ರವರು ಒಂದು ವಾರದ ಮಟ್ಟಿಗೆ ಪರೀಕ್ಷೆಗಳನ್ನು ಮುಂದೂಡಬಹುದೆಂದು ತಿಳಿಸಿರುವುದರಿಂದ (ಉಲ್ಲೇಖ-3) ವಿಶ್ವವಿದ್ಯಾನಿಲಯದ ಶೈಕ್ಷಣಿಕ ವೇಳಾಪಟ್ಟಿ ರಚನಾ ಸಮಿತಿ ಸಭೆಯನ್ನು ದಿನಾಂಕ: 20.07.2023 ರಂದು ಸಭೆ ಕರೆದು, ವಿದ್ಯಾರ್ಥಿಗಳ ಬೇಡಿಕೆ ಮತ್ತು ಕುಲಸಚಿವ (ಪರೀಕ್ಷಾಂಗ) ರವರು ನೀಡಿರುವ ಅಭಿಪ್ರಾಯದ ಮೇಲೆ ಚರ್ಚಿಸಿ, ಸದರಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು UUCMS Portalನಲ್ಲಿ IA ಅಂಕಗಳು ಮತ್ತು Practical Batch ನ್ನು ಮಾಡಲು ತಾಂತ್ರಿಕ ತೊಂದರೆ ಇರುವುದಾಗಿ ತಿಳಿಸಿ, ಒಂದು ವಾರಗಳ ಕಾಲ ತರಗತಿಗಳು ಕೊನೆ ದಿನಾಂಕವನ್ನು ವಿಸ್ತರಿಸಬೇಕೆಂದು ತಿಳಿಸಿರುವುದಕ್ಕೆ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನರುಗಳು ಮತ್ತು ಪ್ರಾಧ್ಯಾಪಕರುಗಳು ಸಮ್ಮತಿಸಿದ್ದಾರೆ. ಈ ಕಾರಣದಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸುಲಲಿತವಾಗಿ ಜರುಗಬೇಕೆನ್ನುವ ಉದ್ದೇಶದಿಂದ ಈಗಾಗಲೇ ನಿಗಧಿಪಡಿಸಿದ್ದ 2, 4 ಮತ್ತು 6ನೇ ಸೆಮಿಸ್ಟರ್‌ಗಳ ತರಗತಿಗಳ ಕೊನ ದಿನಾಂಕ: 22.07.2023ರ ಬದಲು ದಿನಾಂಕ: 28.07.2023ಕ್ಕೆ ವಿಸ್ತರಿಸಲು ಹಾಗೂ ಪರೀಕ್ಷೆಗಳನ್ನು ದಿನಾಂಕ: 01.08.2023 ರಿಂದ ಪ್ರಾರಂಭಿಸಿ, ದಿನಾಂಕ: 30.08.2023ಕ್ಕೆ ಪೂರ್ಣಗೊಳಿಸಲು ಮತ್ತು ದಿನಾಂಕ: 31.08.2023 ಕ್ಕೆ 2023-24 ನೇ ಶೈಕ್ಷಣಿಕ ಸಾಲಿನ 1,3 ಮತ್ತು 5ನೇ ಸೆಮಿಸ್ಟರ್ ತರಗತಿಗಳನ್ನ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ 2022-23ನೇ ಶೈಕ್ಷಣಿಕ ಸಾಲಿನ 2,4 ಮತ್ತು 6ನೇ ಸೆಮಿಸ್ಟರ್‌ಗಳ ಕೊನೆಯ ದಿನಾಂಕ: 22.07.2023ರ ಬದಲು ದಿನಾಂಕ: 28.07.2023ಕ್ಕೆ ವಿಸ್ತರಿಸಲಾಗಿದೆ. ಪರೀಕ್ಷೆಗಳನ್ನು ದಿನಾಂಕ: 01.08.2023ರಿಂದ ಪ್ರಾರಂಭಿಸಲಾಗುವುದು. 2023-24ನೇ ಶೈಕ್ಷಣಿಕ ಸಾಲಿನ 1, 3 ಮತ್ತು 5ನೇ ಸೆಮಿಸ್ಟರ್‌ಗಳ ತರತಿಗಳನ್ನು ದಿನಾಂಕ: 31.08.2023ರಿಂದ ಪ್ರಾರಂಭಿಸಲಾಗುವುದು ಎಂದು ಕುಲಸಚಿವರು ತಿಳಿಸಿದ್ದಾರೆ.

Key words: Mysore University  – postpone – classes -examinations –UG