ಸಿಎಂ ಸ್ಥಾನದ ಬಗ್ಗೆ ನಿರ್ಧಾರ ಮಾಡೋದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ -ಸಚಿವ ಜಮೀರ್ ಅಹ್ಮದ್ ಖಾನ್.

ಮಂಡ್ಯ,ಜುಲೈ,22,2023(www.justkannada.in): ಸಿಎಂ ಮಾಡೋದು ಗೊತ್ತು, ಕೆಳಗಿಳಿಸೋದು ಗೊತ್ತಿದೆ ಎಂದು ಹೇಳಿಕೆ ನೀಡಿದ ಸ್ವಪಕ್ಷದ ಎಂಎಲ್​ಸಿ ಬಿಕೆ ಹರಿಪ್ರಸಾದ್ ​ಗೆ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ಸಿಎಂ ಮಾಡೋದು ಬಿಡೋದು ಅವರ ಕೈಲೂ ಇಲ್ಲ, ನನ್ನ ಕೈಲೂ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆ ನಿರ್ಧಾರವನ್ನು ಮಾಡುತ್ತಾರೆ ಎಂದರು.

ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿ, ಜೆಡಿಎಸ್​ ನಡುವೆ ಹೊಂದಾಣಿಕೆ ಬಗ್ಗೆ ಅವರನ್ನೇ ಕೇಳಬೇಕು. ಜೆಡಿಎಸ್​​ ಪಕ್ಷದ ನಿರ್ಧಾರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

Key words: Sonia Gandhi- Rahul Gandhi -decide -CM-post –Minister -Jameer Ahmed Khan