ಮೈಸೂರು ವಿವಿ ಪದವಿ ಪರೀಕ್ಷೆ  ಮುಂದೂಡಿಕೆ.

ಮೈಸೂರು,ಸೆಪ್ಟಂಬರ್, 2,2021(www.justkannada.in): ಸೆಪ್ಟೆಂಬರ್-ಅಕ್ಟೋಬರ್‌ ನಲ್ಲಿ ನಡೆಯಬೇಕಿದ್ದ ಮೈಸೂರು ವಿವಿಯ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಸೆ.3ರಂದು ಆರಂಭವಾಗಬೇಕಿದ್ದ ಸ್ನಾತಕ ಪದವಿಯ (ಯುಜಿ) 6ನೇ ಸೆಮಿಸ್ಟರ್ (ಸಿಬಿಸಿಎಸ್/ನಾನ್ ಸಿಬಿಸಿಎಸ್-ಪ್ರೆಶರ್ಸ್), 2ನೇ ಸೆಮಿಸ್ಟರ್‌ನ (ಸಿಬಿಸಿಎಸ್-ಪುನಾರ್ವತಿತ) ಹಾಗೂ 2, 4 ಮತ್ತು 6ನೇ ಸೆಮಿಸ್ಟರ್‌ನ (ನಾನ್ ಸಿಬಿಸಿಎಸ್-ಪುನಾವರ್ತಿತ) ಪದವಿ ಪರೀಕ್ಷೆಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಸದರಿ ಪರೀಕ್ಷೆಯನ್ನು ಸೆ.13ರಿಂದ ನಡೆಸಲು ಉದ್ದೇಶಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದೆ ಹೊರಡಿಸಲಾಗುವುದು ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ENGLISH SUMMARY…

UoM Degree exams postponed
Mysuru, September 2, 2021 (www.justkannada.in): The Degree exams of the University of Mysore which were supposed to be held in September-October have been postponed.
The 6th semester (CBCS/Non-CBCS-Freshers), 2nd Semester (CBCS- Repeated), and 2,4, and 6th Semester (Non-CBCS-Repeated) undergraduate exams were scheduled to begin from September 3. But it has been postponed due to several reasons. It is planned to conduct the exams on September 13. However, the revised timetable will be announced later, according to a press release issued by Prof. A.P. Jnanaprakash, Registrar (Exams), University of Mysore.
Keywords: University of Mysore/ Degree exams/ postponed

Key words: Mysore university- Degree- Exam- Postponed