ಅವೈಜ್ಞಾನಿಕ ಟೋಲ್ ಸಂಗ್ರಹ: ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.

ಮೈಸೂರು,ಫೆಬ್ರವರಿ,6,2023(www.justkannada.in):  ಮೈಸೂರು ಜಿಲ್ಲೆ ಕಡಕೋಳ ಕೆಎನ್ ಹುಂಡಿ ಟೋಲ್ ಸಂಗ್ರಹ ಕೇಂದ್ರದಲ್ಲಿ ನಿಯಮ ಉಲ್ಲಂಘಿಸಿ ಅವೈಜ್ಞಾನಿಕವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದಿಂದ  ಪ್ರತಿಭಟನೆ ನಡೆಯಿತು.

ಗುಣಮಟ್ಟದ ರಸ್ತೆ ಸಹ ಇಲ್ಲದೆ ಇದ್ದರೂ  ಟೋಲ್ ಸಂಗ್ರಹ ಮಾಡುತ್ತಲಾಗುತ್ತಿದೆ. ಇಂತಿಷ್ಟು ಸೆಕೆಂಡ್ ಗೆ ಹೆಚ್ಚಾಗಿ ಒಂದು ವಾಹನವು ಟೋಲ್ ನಲ್ಲಿ ಕಾಯುವಂತಿಲ್ಲ, ಸರ್ವಿಸ್ ರೋಡ್ ಚಾಲ್ತಿಯಲ್ಲಿಲ್ಲ, ಹತ್ತಿರದ ಹಳ್ಳಿಗಳಲ್ಲಿ ವಾಸ ಮಾಡುವ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ ಮೂಲಭೂತ ಸೌಕರ್ಯಗಳಾದ ಶೌಚಾಲಯ ಇಲ್ಲ. ಆಂಬುಲೆನ್ಸ್ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ  ಇದರ ಮಾಹಿತಿ ಕೇಳಲು ನೀಡಿರುವ ನಂಬರ್ ಗೆ ಕರೆ ಮಾಡಿದರೆ ಸರಿಯಾಗಿ ಮಾಹಿತಿಯು ಸಿಗುತ್ತಿಲ್ಲ.  ಹಾಗಾಗಿ ಈ ಕೂಡಲೇ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿ, ಇದು ಯಾರಿಗೆ ಟೆಂಡರ್ ಆಗಿದೆ, ಎಷ್ಟು ಹಣಕ್ಕೆ ಟೆಂಡರ್ ಆಗಿದೆ. ಎಂಬುದರ ಪೂರ್ಣ ಮಾಹಿತಿಯನ್ನು ಹಾಕಿ. ರಸ್ತೆಗಳನ್ನ ಸರ್ವಿಸ್ ರೋಡ್ ಗಳನ್ನು ಸರಿಪಡಿಸಿ ನಂತರ ಟೋಲ್  ಸಂಗ್ರಹಿಸಲು ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಅರುಣ್ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷ Y.L. ನವೀನ್ ಕುಮಾರ್, ಮೈಸೂರು ಜಿಲ್ಲಾಧ್ಯ್ಷರಾದ ಬಸವರಾಜು, ನಂಜನಗೂಡು ತಾಲ್ಲೂಕು ಅಧ್ಯಕ್ಷರಾದ ಕೃಷ್ಣನಾಯಕ್, ರಾಜ್ಯ ಗೌರವ ಸಲಹೆಗಾರ ರವೀಂದ್ರ.ಎಂ ಹಾಗೂ ಇತರ ರೈತ ಪದಾಧಿಕಾರಿಗಳು ಸೇರಿ 300ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Key words: mysore- Toll –Collection- Karnataka State Raitha Sangh- Farmers -Protest