ಬರ್ತ್ ಡೇಗೆ ಕೇಕ್, ಹಾರದ ಬದಲು ಗಿಡ ತನ್ನಿ: ಅಭಿಮಾನಿಗಳಲ್ಲಿ ಉಪೇಂದ್ರ ಮನವಿ

ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದೆ.

ಅಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಉಪ್ಪಿ ಅಭಿಮಾನಿಗಳು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದ್ರೆ ಉಪೇಂದ್ರ ಅವರು ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 18ರಂದು ‘ಅಭಿಮಾನಿಗಳ ದಿನ’ ಅಂದ್ರೆ ನನ್ನ ಹುಟ್ಟುಹಬ್ಬ. ಹಾಗಾಗಿ ತಾವುಗಳು ಯಾರೂ ಕೂಡ ಕೇಕ್, ಹೂವಿನ ಹಾರ, ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ. ನಿಮಗೆ ತರಲೇಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.