ಬಿಡುಗಡೆಗೆ ಮುನ್ನವೇ ಚಾಲೆಂಜಿಂಗ್ ಸ್ಟಾರ್ ‘ಒಡೆಯ’ ವಿಡಿಯೋ ಲೀಕ್​

ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಬಿಡುಗಡೆಗೆ ಮುನ್ನವೇ ಚಾಲೆಂಜಿಂಗ್ ಸ್ಟಾರ್ ಅಭಿನಯದ ‘ಒಡೆಯ’ನ ವಿಡಿಯೋ ಲೀಕ್​ ಆಗಿದೆ.

ಒಡೆಯ ಚಿತ್ರದ ಗೀತೆಯ ವಿಡಿಯೋವನ್ನು ಕಿಡಿಗೇಡಿಗಳು ಆನ್​ಲೈನ್​ನಲ್ಲಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಆದರೆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ದೃಶ್ಯಗಳು ಹೇಗೆ ಲೀಕ್ ಆದವು ಎಂಬ ಅಚ್ಚರಿಯ ಪ್ರಶ್ನೆಗಳೂ ಹುಟ್ಟಿಕೊಂಡಿದೆ.