ಕೊನೆ ಟೆಸ್ಟ್’ನಲ್ಲಿ ಗೆದ್ದ ಇಂಗ್ಲೆಂಡ್: ಸಮಬಲದಲ್ಲಿ ಅಂತ್ಯಕಂಡ ಆ್ಯಶಸ್ ಸೀರಿಸ್

ಲಂಡನ್, ಸೆಪ್ಟೆಂಬರ್ 16, 2019 (www.justkannada.in):  ಲಂಡನ್​​ ಓವಲ್ ಮೈದಾನದಲ್ಲಿ ನಡೆದ ಆಯಶಸ್ ಟೆಸ್ಟ್​ ಸರಣಿಯ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 135 ರನ್​ಗಳಿಂದ ಜಯ ಸಾಧಿಸಿದೆ.

ಈ ಮೂಲಕ ಐದು ಪಂದ್ಯಗಳ ಆಯಶಸ್ ಟೆಸ್ಟ್​ ಸರಣಿಯಲ್ಲಿ ಉಭಯ ತಂಡಗಳು 2-2 ರ ಸಮಬಲ ಸಾಧಿಸಿದ್ದು, ಡ್ರಾನಲ್ಲಿ ಅಂತ್ಯ ಕಂಡಿದೆ.

ರೋಚಕತೆಯಿಂದ ಕೂಡಿದ್ದ ಐದನೇ ಟೆಸ್ಟ್​​ನಲ್ಲಿ ಪಂದ್ಯದಲ್ಲಿ ಆಂಗ್ಲರು, ಆಸೀಸ್​ಗೆ ಗೆಲ್ಲಲು 399 ರನ್​ಗಳ ಟಾರ್ಗೆಟ್ ನೀಡಿದ್ದರು. ಈ ಗುರಿ ಬೆನ್ನಟ್ಟಿದ ಆಸೀಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ವಾರ್ನರ್(11) ಮತ್ತೆ ವೈಫಲ್ಯ ಅನುಭವಿಸಿದರೆ, ಮರ್ಕಸ್ ಹ್ಯಾರಿಸ್(9), ಲಬುಸ್ಚಗ್ನೆ(14), ಮಿಚೆಲ್ ಮಾರ್ಶ್​(24) ಬೇಗನೆ ಪೆವಿಲಿಯನ್ ಸೇರಿಕೊಂಡರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಕೂಡ 53 ಎಸೆತಗಳಲ್ಲಿ 23 ರನ್​ಗೆ ಔಟ್ ಆಗಿದ್ದು ತಂಡಕ್ಕೆ ಹೊಡ್ಡ ಹೊಡೆತ ಬಿದ್ದಂತಾಯಿತು.