ರಾಮ ಬಳ್ಳಾರಿ ಬಿಟ್ಟರೂ ಲಕ್ಷ್ಮಣ ಬರುತ್ತಾರೆ- ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕುರಿತು ಶ್ರೀರಾಮುಲು ಮಾತು…

ಬಳ್ಳಾರಿ,ಸೆ,16,2019(www.justkannada.in): ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಂಬಂಧ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ನನಗೆ ಯಾದಗಿರಿಯಲ್ಲಿ ಬಾವುಟ ಹಾರಿಸಲು ಹೇಳಿದ್ದಾರೆ. ನಾನು ಪಕ್ಷದ ತೀರ್ಮಾನಕ್ಕೆ ಬದ್ಧ. ಲಕ್ಷ್ಮಣ್ ಸವದಿ ಬಳ್ಳಾರಿಯಲ್ಲಿ ಬಾವುಟ ಹಾರಿಸುತ್ತಾರೆ. ಬಳ್ಳಾರಿಯನ್ನ ರಾಮ ಬಿಟ್ಟರೂ ಲಕ್ಷ್ಮಣ ಬರುತ್ತಾರೆ ಎಂದು ಹೇಳಿದರು.

ಹಾಗೆಯೇ ಬಳ್ಳಾರಿ ಮೇಲೆ ಪ್ರೀತಿ ಬೇರೆ, ಪಕ್ಷದ ನಿರ್ಧಾರವೇ ಬೇರೆ.ಜೀವ  ಇರುವವರೆಗೂ ನಾನು ಬಳ್ಳಾರಿಯಿಂದ ದೂರ ಆಗಲ್ಲ. ಬಳ್ಳಾರಿಯ ಅಭಿವೃದ್ಧಿ ಕುಂಠಿತಗೊಳ್ಳುವ ಮಾತೇ ಇಲ್ಲ. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Key words: minister- Shriramulu  -in charge -Minister – position – ballari