ಅನುಮಾಸ್ಪದವಾಗಿ ಓಡಾಡುತ್ತಿದ್ದ ಮೂವರ ಬಂಧನ: 65 ಲಕ್ಷ ನಗದು ಪೊಲೀಸರ ವಶಕ್ಕೆ…

ಬೆಂಗಳೂರು, ಸೆಪ್ಟಂಬರ್,3,2020(www.justkannada.in):  ಕಾರಿನಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಬೆಂಗಳೂರಿನ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿ 65 ಲಕ್ಷ ನಗದನ್ನ ವಶಕ್ಕೆ ಪಡೆದಿದ್ದಾರೆ.jk-logo-justkannada-logo

ದಸ್ತಗಿರ್, ಕಿರಣ್ ಕುಮಾರ್ ಮತ್ತು ಮಸ್ತಾನ್ ಬಂಧಿತರು. ಆಂಧ್ರ ಪ್ರದೇಶದ ನೋಂದಣಿ ಕಾರಿನಲ್ಲಿ ಬಂಧಿತ ಮೂವರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಈ ವೇಳೆ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ತಪಾಸಣೆ ನಡೆಸಿದ್ದು ಕಾರಿನಲ್ಲಿ 65 ಲಕ್ಷ ನಗದು ಪತ್ತೆಯಾಗಿದೆ.

ಮೂವರು ಆರೋಪಿಗಳು ಹಣದ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ಹೀಗಾಗಿ ಅನುಮಾನ ಉಂಟಾಗಿದ್ದು ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Arrest – three- suspects- 65 lakh -cash -seized –bangalore-police.