ರಾಜ್ಯಕ್ಕೆ ಜಿಎಸ್ ಟಿ ಬಾಕಿ ಸಿಗುತ್ತಿಲ್ಲ: ಪ್ರಾದೇಶಿಕ ಪಕ್ಷ ಉಳಿದರೇ ಮಾತ್ರ ಸಮಸ್ಯೆ ನಿವಾರಣೆ – ಸಂಸದ ಪ್ರಜ್ವಲ್ ರೇವಣ್ಣ.

ಹಾಸನ,ಫೆಬ್ರವರಿ,6,2023(www.justkannada.in): ರಾಜ್ಯಕ್ಕೆ ಜಿಎಸ್ ಟಿ ಬಾಕಿ ಸಿಗುತ್ತಿಲ್ಲ. ಎಲ್ಲವನ್ನೂ ಬರೀ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.

ಹಾಸನದ ಹೊಳೇನರಸೀಪುರದಲ್ಲಿ ಇಂದು ಮಾತನಾಡಿದ ಪ್ರಜ್ವಲ್ ರೇವಣ್ಣ, ನಾವು ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಾಜ್ಯದ ಜನ ಉಳಿಯಬೇಕು. ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಉಳಿಯಬೇಕು. ಪ್ರಾದೇಶಿಕ ಪಕ್ಷ ಉಳಿದರೇ ರಾಜ್ಯದ ಸಮಸ್ಯೆ ನಿವಾರಣೆಯಾಗುತ್ತದೆ.  ರಾಜ್ಯಕ್ಕೆ ಜಿಎಸ್ ಟಿ ಬಾಕಿ ಸಿಗುತ್ತಿಲ್ಲ ಎಲ್ಲವನ್ನೂ ಬರೀ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ  ಚುನಾವಣೆ ಬಂದಾಗ ಭದ್ರ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಮಾಡಿದ್ದಾರೆ.  ಭದ್ರ ಮೇಲ್ದಂಡೆ ಯೋಜನೆ ಜಾರಿಯಾಗೋದು ಯಾವಾಗಎಂದು ಪ್ರಶ್ನಿಸಿದರು.

ಎ.ಮಂಜು ಜೆಡಿಎಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ,  ಎಚ್ ಡಿಕೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಎ. ಮಂಜು ಪಕ್ಷ ಸೇರ್ಪಡೆ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲಾ ಭಾಗದ ಕಾರ್ಯಕರ್ತರ ಸಭೆ ನಡೆಸುತ್ತೇವೆ. ಸಭೆ ನಡೆಸಿ ಕಾರ್ಯಕರ್ತರ ಜತೆ ಚರ್ಚಿಸಿ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದರು.

Key words: GST- dues- regional party –JDS- solve – problem – MP- Prajwal Revanna.