ಮೈಸೂರು ಎಸ್ಪಿ ಸಿ.ಬಿ ರಿಷ್ಯಂತ್ ಅವರು ಕೊರೋನಾದಿಂದ ಗುಣಮುಖ..

ಮೈಸೂರು.ಸೆಪ್ಟಂಬರ್,2,2020(www.justkannada.in):  ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಕೊರೋನಾದಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.jk-logo-justkannada-logo

ಕೊರೋನಾ ಸೋಂಕಿಗೆ ತುತ್ತಾಗಿದ್ದ ಎಸ್ಪಿ ರಿಷ್ಯಂತ್ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಇದೀಗ ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿ.ಬಿ.ರಿಷ್ಯಂತ್  ಅವರನ್ನ ಪೊಲೀಸ್ ಸಿಬ್ಬಂದಿಗಳು ಹೂಮಳೆ ಸ್ವಾಗತ ಕೋರಿದರು.

ಹಾಗೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವೇಳೆ ಎಸ್ಪಿ ರಿಷ್ಯಂತ್ ಅವರಿಗೆ ಹೂಗುಚ್ಛ ನೀಡಿ ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದರು.

Key words: Mysore SP- Rishyant-cured- Corona