ಲಾಫಿಂಗ್ ಬುದ್ಧನ ಗೆಟಪ್ ಧರಿಸಿದ ಪ್ರಮೋದ್ ಶೆಟ್ಟಿ

ಬೆಂಗಳೂರು, ಸೆಪ್ಟೆಂಬರ್ 02, 2020 (www.justkannada.in): ಪ್ರಮೋದ್ ಶೆಟ್ಟಿ ಸಂಪೂರ್ಣ ನಾಯಕರಾಗಿ ಅಭಿನಯಿಸಲಿರುವ ಚಿತ್ರ ‘ಲಾಫಿಂಗ್ ಬುದ್ಧ’ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ಮಿಸಲಿದ್ದಾರೆ. ಸಿನಿಮಾದ ಫಸ್ಟ್ ಲುಕ್ ನೋಡಿದರೆ ಅವರು ಎಂಥಾ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಪಕ್ಕಾ ಆಗಿದೆ.

ಲಾಫಿಂಗ್ ಬುದ್ಧನ ರೀತಿ ವಿಪರೀತ ದೇಹ ಬೆಳೆಸಿಕೊಂಡು ಪೊಲೀಸ್ ಅಧಿಕಾರಿಯ ದಿರಿಸಿನಲ್ಲಿರುವ ಪ್ರಮೋದ್ ಲುಕ್ ಗಮನ ಸೆಳೆಯುವಂತಿದೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ. ರಿಷಬ್ ನಿರ್ಮಾಣದ ಸಿನಿಮಾವನ್ನು ಎಂ.ಭರತ್ ರಾಜು ನಿರ್ದೇಶಿಸಲಿದ್ದಾರೆ.