ಕಿಚ್ಚ ಸುದೀಪ್’ಗೆ ಇಂದು ಜನ್ಮ ದಿನದ ಸಂಭ್ರಮ

ಬೆಂಗಳೂರು, ಸೆಪ್ಟೆಂಬರ್ 02, 2020 (www.justkannada.in): ಕಿಚ್ಚ ಸುದೀಪ್, ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.

ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸುದೀಪ್ ಮನೆ ಮುಂದೆ ಅಭಿಮಾನಿಗಳು ಕ್ಯೂ ನಿಂತು ವಿಶ್ ಮಾಡುವುದನ್ನು ಅವರ ಫ್ಯಾನ್ಸ್ ಗಳು ಮಿಸ್ ಮಾಡಿಕೊಂಡಿದ್ದಾರೆ.