Thursday, August 6, 2026

BDA Apartments

Home Front Page ನ.11ರಿಂದ ಬಿ.ವಿ ಕಾರಂತ ಕಾಲೇಜು ರಂಗೋತ್ಸವ

ನ.11ರಿಂದ ಬಿ.ವಿ ಕಾರಂತ ಕಾಲೇಜು ರಂಗೋತ್ಸವ

ಮೈಸೂರು,ನವೆಂಬರ್,8,2024 (www.justkannada.in):  ನವೆಂಬರ್ 11ರಿಂದ 15ವರೆಗೆ ರಂಗಾಯಣದಲ್ಲಿ ಬಿ ವಿ ಕಾರಂತ ಕಾಲೇಜು ರಂಗೋತ್ಸವ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್ ತಿಳಿಸಿದರು.

ಮೈಸೂರು ರಂಗಾಯಣ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ತಿಪಟೂರ್, ಮೈಸೂರು ರಂಗಾಯಣ ಕಳೆದ 35ವರ್ಷದಿಂದ ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳನ್ನ ಯಶಸ್ವಿಯಾಗಿ ನಡೆಸುತ್ತ ಬಂದಿದೆ. ಬಹುರೂಪಿ, ವಸ್ತುಪ್ರದರ್ಶನ, ಚಿಣ್ಣರಮೇಳ, ನಾಟಕೋತ್ಸವ ಮುಂತಾದ ಕಾರ್ಯಕ್ರಮಗಳನ್ನ ಆಯೋಜಿಸುತ್ತ ಬಂದಿದೆ. ಬಿ. ವಿ ಕಾರಂತ ಕಾಲೇಜು ರಂಗೋತ್ಸವವನ್ನ ನವೆಂಬರ್ 11ರಿಂದ 15ವರೆಗೆ ರಂಗಾಯಣದಲ್ಲಿ ನಡೆಯಲಿದೆ. 11ನೇ ತಾರೀಖು ಚಿತ್ರ ಕಲಾವಿದ, ವಿನ್ಯಾಸಕ ಬಾದಲ್ ನಂಜುಂಡಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ನವೆಂಬರ್ 10,17, 24 ರಂದು ಚೆಕ್ ಮೆಟ್ ನಾಟಕ ಪ್ರದರ್ಶನ ಮಾಡಲಾಗುತ್ತದೆ. ನವೆಂಬರ್ 17ರಂದು ಚೆಕ್ ನಾಟಕ ನೂರನೇ ಪ್ರದರ್ಶನ ಕಾಣಲಿದೆ ಎಂದು ಸತೀಶ್ ತಿಪಟೂರ್ ತಿಳಿಸಿದರು.

Key words: Mysore, Rangayana, BV Karanta College Rangotsava, Nov 11