Tuesday, September 15, 2026

BDA Apartments

ಕೆ.ಎ.ಎಸ್ ಪರೀಕ್ಷೆಗೆ 30 ದಿನಗಳ ತರಬೇತಿ: ನ.16ರೊಳಗೆ ಹೆಸರು ನೋಂದಾಯಿಸಿ BDA JK_Adv BDA Adv
Home Front Page ಕೆ.ಎ.ಎಸ್ ಪರೀಕ್ಷೆಗೆ 30 ದಿನಗಳ ತರಬೇತಿ: ನ.16ರೊಳಗೆ ಹೆಸರು ನೋಂದಾಯಿಸಿ

ಕೆ.ಎ.ಎಸ್ ಪರೀಕ್ಷೆಗೆ 30 ದಿನಗಳ ತರಬೇತಿ: ನ.16ರೊಳಗೆ ಹೆಸರು ನೋಂದಾಯಿಸಿ

ಬೆಂಗಳೂರು, ನವೆಂಬರ್ ,7,2024 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಲೋಕ ಸೇವಾ ಆಯೋಗದವರು 2024ರ ಡಿಸೆಂಬರ್ 29ರಂದು ನಡೆಸಲಿರುವ ಕೆಎಎಸ್ ಪರೀಕ್ಷೆಗೆ 30 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ನಡೆಸಲು ನಿರ್ಧರಿಸಿದೆ.

ಆಸಕ್ತರು  ನವೆಂಬರ್ 16  ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.ಕೆ.ಎ.ಎಸ್ ಪರೀಕ್ಷೆಗೆ 30 ದಿನಗಳ ತರಬೇತಿ ksou

ಹೆಚ್ಚಿನ ವಿವರಗಳಿಗೆ 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: KSOU, 30 Days, Coaching, KAS Exam, Mysore