Sunday, September 20, 2026

BDA Apartments

ಅಂಬೇಡ್ಕರ್ ಜಯಂತಿ ಅಂಗವಾಗಿ ಮೈಸೂರಿನಲ್ಲಿ ಏ.14ರಂದು ಸಮಾನತೆಗಾಗಿ ಓಟ BDA JK_Adv BDA Adv
Home Front Page ಅಂಬೇಡ್ಕರ್ ಜಯಂತಿ  ಅಂಗವಾಗಿ ಮೈಸೂರಿನಲ್ಲಿ ಏ.14ರಂದು ಸಮಾನತೆಗಾಗಿ ಓಟ

ಅಂಬೇಡ್ಕರ್ ಜಯಂತಿ  ಅಂಗವಾಗಿ ಮೈಸೂರಿನಲ್ಲಿ ಏ.14ರಂದು ಸಮಾನತೆಗಾಗಿ ಓಟ

ಮೈಸೂರು,ಏಪ್ರಿಲ್,2,2022(www.justkannada.in): ಭಾರತೀಯ ಪರಿವರ್ತನ ಸಂಘ ಏಪ್ರಿಲ್ 14 ರಂದು ಡಾ.ಬಿ.ಆರ್‌. ಅಂಬೇಡ್ಕರ್ ಜಯಂತಿ ಅಂಗವಾಗಿ ರಾಜ್ಯ ಮಟ್ಟದ ಸಮಾನತೆಗಾಗಿ ಓಟ ಆಯೋಜಿಸಿದೆ.

ಸುಮಾರು 15 ಕೀ.ಮಿ ಓಟವಾಗಿದ್ದು, ನಗರದ ಪುರಭವನದಿಂದ ಆರಂಭವಾಗಿ ಹಾರ್ಡಿಂಜ್ ವೃತ್ತ, ಸಂಸ್ಕೃತ ಪಾಠಶಾಲೆ, ಅಗ್ರಹಾರ ವೃತ್ತ, ಸಿದ್ದಪ್ಪ ವೃತ್ತ, ಆರ್‌ಟಿಒ ಕಚೇರಿ, ಅಶೋಕ ವೃತ್ತ, ಬ್ರಾಂಡ್ ಫ್ಯಾಕ್ಟರಿ, ನ್ಯಾಯಾಲಯದ ಮೂಲಕ ಮತ್ತೆ ಪುರಭವನಕ್ಕೆ ಬಂದು ಸೇರಲಿದೆ ಎಂದು ಸಂಚಾಲಕ ಸೋಸಲೆ ಸಿದ್ದರಾಜು ತಿಳಿಸಿದರು.ಅಂಬೇಡ್ಕರ್ ಜಯಂತಿ ಅಂಗವಾಗಿ ಮೈಸೂರಿನಲ್ಲಿ ಏ.14ರಂದು ಸಮಾನತೆಗಾಗಿ ಓಟ sasds

ಈ ಓಟದಲ್ಲಿ ಮೊದಲ ಬಹುಮಾನವಾಗಿ 10 ಸಾವಿರ ನಗದು, ಎರಡನೇ ಬಹುಮಾನವಾಗಿ 5 ಸಾವಿರ ಹಾಗೂ 3ನೇ  ಬಹುಮಾನವಾಗಿ 3 ಸಾವಿರ ನಗದು ನೀಡಲಾಗುವುದು. ಈ ಓಟದ ಸ್ಪರ್ಧೆಗೆ 100 ರೂ. ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಸಂಘದ ಪದಾಧಿಕಾರಿಗಳಾದ ಪ್ರಭುಸ್ವಾಮಿ, ಕರಾಟೆ ಸಿದ್ದರಾಜು, ಮಹದೇವಣ್ಣ ದಿನಕರ್, ಶ್ರೀನಿವಾಸ್ ಹಾಗೂ ಪ್ರತಾಪ್ ಇದ್ದರು.

Key words: Mysore -race – equality –  Ambedkar Jayanti