Sunday, October 18, 2026

Dasara Wishes

Happy Dasara
Home Front Page ರಾಜಕೀಯ ಶಕ್ತಿಕೇಂದ್ರವಾದ ಮೈಸೂರು: ಇಂದು ಒಂದೇ ವೇದಿಕೆಯಲ್ಲಿ ಸಿಎಂ, ಮಾಜಿ ಸಿಎಂ, ಡಿಸಿಎಂ

ರಾಜಕೀಯ ಶಕ್ತಿಕೇಂದ್ರವಾದ ಮೈಸೂರು: ಇಂದು ಒಂದೇ ವೇದಿಕೆಯಲ್ಲಿ ಸಿಎಂ, ಮಾಜಿ ಸಿಎಂ, ಡಿಸಿಎಂ

ಮೈಸೂರು,ಆಗಸ್ಟ್,29,2026 (www.justkannada.in): ಅರಮನೆ ನಗರಿ ಮೈಸೂರು ಇಂದು ರಾಜಕೀಯ ಶಕ್ತಿಕೇಂದ್ರವಾಗಲಿದೆ. ಹೌದು ಇಂದು  ಒಂದೇ ವೇದಿಕೆಯಲ್ಲಿ ಸಿಎಂ ಡಿಕೆ ಶಿವಕುಮಾರ್ , ಮಾಜಿ ಸಿಎಂ ಸಿದ್ದರಾಮಯ್ಯ ಕಾಣಿಸಿಕೊಳ್ಳಲಿದ್ದಾರೆ.

ಇಂದು ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಮಠದಲ್ಲಿ ರಾಜೇಂದ್ರ‌ ಶ್ರೀಗಳ ಜಯಂತಿ ಕಾರ್ಯಕ್ರಮ  ಮತ್ತು ಮೈಸೂರು ಪತ್ರಕರ್ತರ ಸಂಘದ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್ ಆಗಮಿಸಲಿದ್ದಾರೆ. ಹಾಗೆಯೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಹ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ.ರಾಜಕೀಯ ಶಕ್ತಿಕೇಂದ್ರವಾದ ಮೈಸೂರು dks-siddaramaiah dks siddaramaiah

ನಗರದ ಊಟಿ ರಸ್ತೆಯ (ಜೆಎಸ್ಎಸ್ ಕಾಲೇಜು ಹತ್ತಿರ) ಕೆಎನ್ಎಸ್ ಬಡಾವಣೆಯ ಪತ್ರಕರ್ತ ಸಂಘದ ನಿವೇಶನದಲ್ಲಿ ಜರುಗುವ ಪತ್ರಿಕಾ ದಿನಾಚರಣೆಯಲ್ಲಿ ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.ರಾಜಕೀಯ ಶಕ್ತಿಕೇಂದ್ರವಾದ ಮೈಸೂರು jk02_new jk02 new

ಈ ಮೂಲಕ ಒಂದೇ ವೇದಿಕೆಯಲ್ಲಿ ಸಿಎಂ ಡಿಕೆ ಶಿವಕುಮಾರ್,  ಮಾಜಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಪರಮೇಶ್ವರ್ ಕಾಣಿಸಿಕೊಳ್ಳಲಿದ್ದಾರೆ. ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ,  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್  ಸೇರಿ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

Key words: Mysore, political, powerhouse,CM, former CM, DCM, same stage