Sunday, October 18, 2026

Dasara Wishes

Happy Dasara
Home Front Page ತಮಿಳುನಾಡಿಗೆ ನೀರು, ಒಳಹರಿವು ಕುಸಿತ: ತುಂಬಿದ್ದ ಕಬಿನಿ ಡ್ಯಾಂ ಖಾಲಿ

ತಮಿಳುನಾಡಿಗೆ ನೀರು, ಒಳಹರಿವು ಕುಸಿತ: ತುಂಬಿದ್ದ ಕಬಿನಿ ಡ್ಯಾಂ ಖಾಲಿ

ಮೈಸೂರು,ಆಗಸ್ಟ್,29,2026 (www.justkannada.in):  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆಗಾಗಿ ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀರು ಹರಿದುಬಿಟ್ಟ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ 71.9 ಅಡಿಗೆ ಕುಸಿದಿದೆ.

ತಮಿಳುನಾಡಿಗೆ ನೀರು ಹರಿಸಿ ಇದೀಗ ಕಬಿನಿ ಡ್ಯಾಂ ಭರ್ತಿಗಾಗಿ ಹಿಂಗಾರು ಮಳೆ ನಂಬಿಕೊಂಡಿದ್ದ ಸರ್ಕಾರ, ಅಧಿಕಾರಿಗಳಿಗೆ ಮಳೆರಾಯ ಶಾಕ್ ನೀಡಿದ್ದು ಕಬಿನಿ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಕುಸಿತ ಕಂಡಿದೆ.  ಒಳಹರಿವು ಕಡಿಮೆಯಾದರೂ ಸಹ ಅಧಿಕಾರಿಗಳು  ಜಲಾಶಯದಿಂದ 8,200 ಹೊರಹರಿವು ಬಿಟ್ಟಿದ್ದಾರೆ.ತಮಿಳುನಾಡಿಗೆ ನೀರು, ಒಳಹರಿವು kabini

ಕಬಿನಿ ಜಲಾಶಯಕ್ಕೆ  ಕಳೆದ ತಿಂಗಳು ಇದೇ ದಿನ 30,000 ಕ್ಯೂಸೆಕ್  ಹೆಚ್ಚು ಒಳಹರಿವಿತ್ತು. ಆದರೆ ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು 4,500 ಕ್ಯೂಸೆಕ್ ಗೆ ಇಳಿದಿದೆ.ತಮಿಳುನಾಡಿಗೆ ನೀರು jk02_new jk02 new

ಕಬಿನಿ ಜಲಾಶಯ ನೀರಿನ ಸಂಗ್ರಹದ ವಿವರ ಹೀಗಿದೆ.

ಗರಿಷ್ಠಮಟ್ಟ: 84 ಅಡಿ

ಇಂದಿನ ಮಟ್ಟ: 71.90 ಅಡಿ

ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಸಾಮರ್ಥ್ಯ: 12.62 ಟಿಎಂಸಿ

ಒಳಹರಿವು: 4993ಕ್ಯೂಸೆಕ್

ಹೊರಹರಿವು: 8260 ಕ್ಯೂಸೆಕ್

Key words: Kabini Dam, water, Tamilnadu, empty