Tuesday, August 4, 2026

BDA Apartments

Home Front Page ಮೈಲಾಕ್ ನಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಸ್ವಚ್ಛತಾ ಯಂತ್ರ ಕೊಡುಗೆ: ನಾಳೆ ಸ್ವೀಕಾರ ಕಾರ್ಯಕ್ರಮ.

ಮೈಲಾಕ್ ನಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಸ್ವಚ್ಛತಾ ಯಂತ್ರ ಕೊಡುಗೆ: ನಾಳೆ ಸ್ವೀಕಾರ ಕಾರ್ಯಕ್ರಮ.

ಮೈಸೂರು,ಡಿಸೆಂಬರ್,21,2022(www.justkannada.in): ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯು ನಗರದ ಮೇಟಗಳ್ಳಿಯಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಸ್ವಚ್ಛತಾ ಯಂತ್ರ ಕೊಡುಗೆಯಾಗಿ ನೀಡುತ್ತಿದೆ.

ಸಿ.ಎಸ್.ಆರ್. ಅನುದಾನದಡಿಯಲ್ಲಿ ರೂ. 5.00 ಲಕ್ಷ ಮೌಲ್ಯದ Ride on Scrubber Drier’ ಎಂಬ ಯಂತ್ರವನ್ನು  ಮೈಲಾಕ್ ಸಂಸ್ಥೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಕೊಡುಗೆಯಾಗಿ ನೀಡುತ್ತಿದೆ.

ಯಂತ್ರವನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಮಂಜುನಾಥ್  ಅವರು  ನಾಳೆ ಮಧ್ಯಾಹ್ನ 12-00 ಕ್ಕೆ ಆಸ್ಪತ್ರೆಯ ಆವರಣದಲ್ಲಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ಅಧ್ಯಕ್ಷರಾದ ಆರ್. ರಘು (ಕೌಟಿಲ್ಯ), ವ್ಯವಸ್ಥಾಪಕ ನಿರ್ದೇಶಕರಾದ ಕುಮಾರಸ್ವಾಮಿ ಜಿ, ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಹಾಜರಿರುತ್ತಾರೆ.

Key words: MYSORE PAINTS AND VARNISH LIMITED- donates -cleaning machine – Jayadeva Heart Hospital