ಸ್ವಪಕ್ಷಿಯರಲ್ಲೇ ಹೊಂದಾಣಿಕೆ ಕೊರತೆ : ಆಸ್ಪತ್ರೆ ಪರಿಶೀಲನೆಗೆ ಬಂದ ಸಂಸದ ಪ್ರತಾಪ್‌ ಸಿಂಹಗೆ ಮುಜುಗರ‌…

ಮೈಸೂರು,ಜೂ,27,2020(www.justkannada.in): ಮೈಸೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪರಿಶೀಲನೆಗೆ ಬಂದಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮುಜುಗರ ಅನುಭವಿಸಿದ ಘಟನೆ ನಡೆದಿದೆ.

ತಾಯಿ ಮಕ್ಕಳ ಆಸ್ಪತ್ರೆ ಪರಿಶೀಲನೆಗೆ ಬಂದ ಪ್ರತಾಪ್‌ಸಿಂಹಗೆ ಸ್ಥಳೀಯ ಜನಪ್ರತಿನಿಧಿಗಳು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಹೌದು ನೀವೇ ಭೇಟಿ ಮಾಡಿದ್ರೆ ಹೇಗೆ ನಮಗೆಲ್ಲ ಮಾಹಿತಿ ಕೊಡೋರು ಯಾರು..? ಕಾರ್ಪೋರೇಟರ್ ಹಾಗೂ ಶಾಸಕರ ಗಮನಕ್ಕೆ ಬಾರದೇ ನೀವೇಗೆ ವಿಸಿಟ್ ಮಾಡ್ತೀರಾ..? ಎಂದು ಸ್ಥಳೀಯ ಕಾರ್ಪೋರೆಟರ್ ಹಾಗೂ ಆಸ್ಪತ್ರೆಯ ಸುರಕ್ಷಾ ಕಮಿಟಿ ಸದಸ್ಯರು ಸಂಸದ ಪ್ರತಾಪ್‌ಸಿಂಹ‌ಗೆ ಪ್ರಶ್ನೆ‌ ಕೇಳಿದ್ದಾರೆ.

ಸ್ಥಳಿಯ ಶಾಸಕರನ್ನು ಕರೆದಿಲ್ಲ, ಜತೆಗೆ ಕಾರ್ಪೋರೇಟರ್ ಹಾಗೂ ಶಾಸಕರ ಗಮನಕ್ಕೆ ತರದೆ  ಹೇಗೆ ಭೇಟಿ ನೀಡಿದ್ದೀರಿ. ನಾವೆಲ್ಲಾ ಯಾಕೆ ಇದ್ದೀವಿ..? ಎಂದು ಸಂಸದ ಪ್ರತಾಪ್ ಸಿಂಹರಿಗೆ ಸ್ಥಳಿಯ ಜನಪ್ರತಿನಿಧಿಗಳು ಕೇಳಿದ್ದಾರೆ.mysore-mp-prathap-simha-hospital-visit

ಈ ವೇಳೆ ಮುಜುಗರ ಅನುಭವಿಸಿದ ಸಂಸದ ಪ್ರತಾಪ್ ಸಿಂಹ, ಮಾಹಿತಿ ನೀಡುವುದರಲ್ಲಿ ಗೊಂದಲ ಉಂಟಾಗಿದೆ. ಕೇಂದ್ರ ಸರ್ಕಾರ ಅನುದಾನದಲ್ಲೂ ಆಸ್ಪತ್ರೆ ನಿರ್ಮಾಣಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಈ ಮೂಲಕ ಸ್ವಪಕ್ಷಿಯರಲ್ಲೆ ಹೊಂದಾಣಿಕೆ ಕೊರತೆ ಉಂಟಾಗಿದೆಯೇ ಸ್ಥಳೀಯ ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಮತ್ತು ಪ್ರತಾಪ್ ಸಿಂಹ ನಡುವೆ ಮುಸುಕಿನ ಗುದ್ದಾಟ ಉಂಟಾಗಿದೆಯೇ ಎಂಬ ಅನುಮಾನ ಮೂಡಿದೆ.

Key words: mysore- MP- Prathap simha-Hospital-visit