ಇಂಧನ ದರದ ಸಂಖ್ಯೆಗಿಂತ ಮೋದಿಯವರ ವಯಸ್ಸೇ ಕಿರಿಯದ್ದು : ಪಿಎಂ ಕೇರ್ ನಿಧಿಗೆ ಎಷ್ಟು ಹಣ ಬಂದಿದೆ ಬಹಿರಂಗಪಡಿಸಿ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹ…

ಮೈಸೂರು,ಜೂ,27,2020(www.justkannada.in): ಇಂಧನ ದರದ ಸಂಖ್ಯೆಗಿಂತ ಮೋದಿಯವರ ವಯಸ್ಸೇ ಕಿರಿದಾಗಿದೆ. ಮೋದಿಜಿ ಐ ಕಂಗ್ರಾಜ್ಯುಲೇಟ್ ಫಾರ್ ದಿಸ್ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದರು.

ನಿರಂತರ ಇಂಧನ ದರ ಏರಿಕೆ ಹಾಗೂ ಖಾಸಗಿ ಆಸ್ಪತ್ರೆಗಳ ಕರೊನಾ ಚಿಕಿತ್ಸೆಗೆ ಸರ್ಕಾರದ ನಿಗದಿಪಡಸಿರುವ ದರ ವಿರೋಧಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಬಿಜೆಪಿ ಮುಖಂಡರಿಗೆ ನಾಚಿಕೆ ಆಗಬೇಕು. ಒಂದು ಕಡೆ ಚೀನಿ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರನ್ನು ಸಾಯಿಸುತ್ತಿದ್ದಾರೆ. ಮತ್ತೊಂದು ಕಡೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5 ಲಕ್ಷ ಗಡಿ ದಾಟಿದೆ. ಒಂದು ಕಡೆ ಚೀನಾ ವಿರುದ್ಧವಾಗಿ ಮಾತನಾಡುತ್ತೀರಿ. ಮತ್ತೊಂದು ಕಡೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣವನ್ನು ಚೀನಿ ಕಂಪನಿಗೆ ಕೊಟ್ಟಿದ್ದೀರಿ. ಬಿಜೆಪಿಯವರ ಚೀನಾ ಪ್ರೀತಿ ಇದರಿಂದಲೇ ಗೊತ್ತಾಗುತ್ತದೆ. ಪಿಎಂ ಕೇರ್ ನಿಧಿಗೆ ಎಷ್ಟು ಹಣ ಬಂದಿದೆ ಎಂದು ಈಗಲಾದರೂ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.Narendra Modi- age -fuel rates-KPCC- Lakshman -mysore

ಇಂಧನ ದರದ ಸಂಖ್ಯೆಗಿಂತ ಮೋದಿಯವರ ವಯಸ್ಸೇ ಕಿರಿದಾಗಿದೆ ಮೋದಿಜಿ ಐ ಕಂಗ್ರಾಜ್ಯುಲೇಟ್ ಫಾರ್ ದಿಸ್ ಎಂದು ವ್ಯಂಗ್ಯವಾಡಿದ ಲಕ್ಷ್ಮಣ್ , ಕರೊನಾ ಪೀಡಿತ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ 14 ದಿನ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕರೊನಾ ಪೀಡಿತ ವ್ಯಕ್ತಿ ಬರೋಬ್ಬರಿ 6,58,000 ರೂಗಳನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಕರೂನಾ ರೋಗಿಗಳಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಸರ್ಕಾರ ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ಬಾಬಾ ರಾಮದೇವ್ ಇಸ್ ಈ ಬಿಜೆಪಿ ಏಜೆಂಟ್..

ಇನ್ನು ಬಾಬಾ ರಾಮದೇವ್ ಅವರು ಕರೊನಾಗೆ ಆಯುರ್ವೇದ ಔಷಧಿ ಕಂಡುಹಿಡಿಯಲಾಗಿದೆ ಎಂದು “CORONIL” ಮತ್ತು “SWASARI” ಎಂಬ ಔಷಧಿ ಬಾಟಲಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಬಾಬಾ ರಾಮದೇವ್ ಇಸ್ ಈ ಬಿಜೆಪಿ ಏಜೆಂಟ್ ಎಂದು  ಎಂ. ಲಕ್ಷ್ಮಣ್ ಕಿಡಿ ಕಾರಿದರು.

Key words: Narendra Modi- age -fuel rates-KPCC- Lakshman -mysore