ಮೈಸೂರಿನಲ್ಲಿ ಇಂದು 11 ಕೇಸ್ ಬರಲಿದೆ: ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ಧ- ಡಿಹೆಚ್‌ ಓ ವೆಂಕಟೇಶ್ ಹೇಳಿಕೆ…

ಮೈಸೂರು,ಜೂ,27,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು 11 ಕೇಸ್ ಬರಲಿದೆ. ಕೊರೊನಾ ನಿಯಂತ್ರಿಸಲು ಮೈಸೂರು ಸಜ್ಜಾಗಿದ್ದು, ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ದರಿದ್ದೇವೆ ಎಂದು ಮೈಸೂರು ಡಿಹೆಚ್ ಓ ವೆಂಕಟೇಶ್ ತಿಳಿಸಿದರು.

ಮೈಸೂರಿನಲ್ಲಿ ಕೊರೋನಾ ಹರಡುವಿಕೆ ಕುರಿತು ಮಾತನಾಡಿದ ಡಿಹೆಚ್. ಓ ವೆಂಕಟೇಶ್, ದುರಾದೃಷ್ಟವಶಾತ್ ಮೈಸೂರಿನಲ್ಲಿ ಒಂದು ಕೊರೊನಾ ಸೋಂಕಿತನ ಸಾವಾಗಿದೆ. ಜನರು ಯಾವುದನ್ನು ಮುಚ್ಚಿಡಬೇಡಿ. ನೀವು ನಿಮ್ಮ ಕುಟುಂಬ ಹಾಗೂ ಸಮಾಜವನ್ನ ಕಾಪಾಡಲು ಸತ್ಯ ಹೇಳಬೇಕು. ಜನ‌ ಸುಮ್ಮನೆ ಇದ್ದರೆ ಕೊರೊನಾ ಸಮುದಾಯಕ್ಕೆ ಹರಡಲಿದೆ. ಹೀಗಾಗಿ ಜನ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹೆದರಬೇಡಿ ಎಂದು ಮನವಿ ಮಾಡಿದರು.11-covid-cases-mysore-ready-protection-dho-venkatesh

ಮೈಸೂರಿನಲ್ಲಿ ಎರಡನೇ ಕೋವಿಡ್ ಆಸ್ಪತ್ರೆ ಆರಂಭಕ್ಕೂ ಸಿದ್ದತೆ ಮಾಡಿಕೊಂಡಿದ್ದೇವೆ. ವಿಮಾನ ನಿಲ್ದಾಣಾದ ಪಕ್ಕದಲ್ಲಿರುವ ವಿವಿ ಕಟ್ಟಡವನ್ನು ಕೋವಿಡ್ ಚಿಕಿತ್ಸೆಗೆ ಸಿದ್ದಪಡಿಸುತ್ತಿದ್ದೇವೆ. ಕೊರೊನಾ ನಿಯಂತ್ರಿಸಲು ಮೈಸೂರು ಸಜ್ಜಾಗಿದೆ. ಯಾವುದೇ ಸಂದರ್ಭದಲ್ಲಿ  ಸಾರ್ವಜನಿಕರು ನನಗೆ ನೇರವಾಗಿ ಕರೆ ಮಾಡಬಹುದು. ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ದರಿದ್ದೇವೆ ಎಂದು ಡಿಹೆಚ್.ಓ ತಿಳಿಸಿದರು.

Key words: 11 covid cases – Mysore-ready – protection – DHO Venkatesh