ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿ ಪಟಾಲಂನ ಅಧ್ಯಕ್ಷ ಪ್ರತಾಪ್ ಸಿಂಹ-ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು.

ಮೈಸೂರು,ಜೂನ್,20,2023(www.justkannada.in):  ಸಚಿವರಾದ ಎಂ.ಬಿ ಪಾಟೀಲ್ ಮತ್ತು ಎಚ್. ಸಿ ಮಹದೇವಪ್ಪರನ್ನ ಸಿಎಂ ಸಿದ್ದರಾಮಯ್ಯ ಅವರ ಚೇಲಾಗಳು ಎಂದಿದ್ದಾರೆ. ಬಿಎಲ್ ಸಂತೋಷ್, ಪ್ರಹ್ಲಾದ್ ಜೋಶಿ ಪಟಾಲಂನ ಅಧ್ಯಕ್ಷ ಪ್ರತಾಪ್ ಸಿಂಹ. ಕಾರ್ಯದರ್ಶಿ ಸಿ ಟಿ ರವಿ ಎಂದು ಸಂಸದ ಪ್ರತಾಪ್ ಸಿಂಹಗೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷಣ್ ತಿರುಗೇಟು ನೀಡಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಎಂ.ಲಕ್ಷ್ಮಣ್, ನಿಮ್ಮ ಯೋಗ್ಯತೆಗೆ ನಿಮ್ಮ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರೋದೆ ಒಂದು. ಜನರಿಗೆ ನಿಮ್ಮ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಉತ್ತರ ಕೊಡುತ್ತಾರೆ. ಪಾರ್ಲಿಮೆಂಟ್ ನಲ್ಲಿ ಎಷ್ಷು ದಿನ ಮಾತನಾಡಿದ್ದೀರಾ.? ಎಷ್ಟು ದಿನ ರಾಜ್ಯದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೀರಿ. ನೀವು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯನಾಗುತ್ತೇನೆ ಅಂದು ಕೊಂಡಿದ್ದೀರಾ..? ನಿಮ್ಮ ಬಂಡವಾಳ ನಮಗೂ ಗೊತ್ತು. ನೀವು ಮಾಡುತ್ತಿರುವ ಅಕ್ರಮಗಳು ನಮಗೂ ಗೊತ್ತು. ಮೈಸೂರು ದಶಪಥ  ರಸ್ತೆ  ಕಾಮಗಾರಿಯಲ್ಲಿ ಎಷ್ಟು ಪರ್ಸೆಂಟೇಜ್ ಕಮಿಷನ್  ತಗೊಂಡಿದ್ದೀರಿ ಅನ್ನೋದು ಗೊತ್ತಿದೆ. ಕೊಡಗಿನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ ಅಂತಲೂ ಗೊತ್ತಿದೆ. ಒಕ್ಕಲಿಗರ ಮೇಲೆ ಇದ್ದಕ್ಕಿದ್ದ ಹಾಗೆ ಯಾಕೆ ಒಲವು ಬಂದಿದೆ ಡಿ.ಕೆ ಶಿವಕುಮಾರ್ ಬಗ್ಗೆ ಪ್ರೀತಿ ವಿಶ್ವಾಸ ಇದ್ದರೆ ಯಾಕೆ ಜೈಲಿಗೆ ಹಾಕಿಸಿದ್ರಿ.? ಒಕ್ಕಲಿಗರ ಮೇಲಿದ್ದ ಅಭಿಮಾನ ಆವಾಗ ಎಲ್ಲಿ ಹೋಗಿತ್ತು.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ  ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರ ಜೊತೆ ಚರ್ಚೆ ಮಾಡಲು ಸಂಸದ ಪ್ರತಾಪ್ ಸಿಂಹಗೆ ಆಹ್ವಾನ ನೀಡಿದ ಎಂ.ಲಕ್ಷ್ಮಣ್, ಏರ್ ಪೋರ್ಟ್ ವಿಚಾರವಾಗಿ ಒಂದು ಸಭೆ ಮಾಡುತ್ತೇವೆ. ನೀವು ಹೇಳಿದ ಕಡೆಯಲ್ಲಿ ಸಭೆ ಮಾಡೋಣ. ನೀವು ಏನು ಮಾಡಬೇಕು ಎಂದುಕೊಂಡಿದ್ದೀರಿ ಅದನ್ನ ತಿಳಿಸಿ. ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರನ್ನು ಕರೆದುಕೊಂಡು ಬರುತ್ತೇವೆ. ಏರ್ ಪೋರ್ಟ್ ಅಭಿವೃದ್ಧಿಗೆ ನಿಮ್ಮ ಯೋಜನೆ ಏನಿದೆ ಎಂದು ತಿಳಿಸಲಿ. ಕೇಂದ್ರ ಸರ್ಕಾರದಿಂದ ಏನೆಲ್ಲಾ ಸಹಕಾರ ತರಬೇಕೋ ಮೊದಲು ತನ್ನಿ. ನಮ್ಮಿಂದ ಏನು ಬೇಕು ಎಲ್ಲವನ್ನು ಸಹಕಾರ ಮಾಡಲಿದ್ದೇವೆ. ಏರ್ ಪೋರ್ಟ್ ಮಾಡಲಿಲ್ಲ, ರೈಲ್ವೆ ಟರ್ಮಿನಲ್ ಮಾಡುತ್ತೇವೆ ಎಂದು ಮಾಡಲಿಲ್ಲ. ಸುಮ್ಮನೆ ಕೆಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡುವುದಲ್ಲ. ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದರು.

Key words: mysore-MP-Pratap SiMha-KPCC -Spokesperson -M. Laxman